ಪಶ್ಚಿಮ ಬಂಗಾಳ, ಮಾ 06(DaijiworldNews/SK): ಆಡಳಿತಾರೂಢ ಟಿಎಂಸಿ ರಾಜ್ಯದ ಮಹಿಳೆಯರ ಸುರಕ್ಷತೆಯ ಬದಲಾಗಿ, ಓಲೈಕೆ ರಾಜಕಾರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆರೋಪಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಕೇಂದ್ರ ಸ್ಥಾನವಾದ ಬಾರಾಸತ್ನಲ್ಲಿ ನಡೆದ ‘ನಾರಿ ಶಕ್ತಿ ವಂದನ ಅಭಿನಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ಹಲವೆಡೆ, ಬಡವರು, ದಲಿತರು ಹಾಗೂ ಬುಡಕಟ್ಟು ಕುಟುಂಬಗಳ ಹೆಣ್ಣು ಮಕ್ಕಳ ಮೇಲೆ ಟಿಎಂಸಿ ನಾಯಕರು ದೌರ್ಜನ್ಯ ಎಸಗುತ್ತಿದ್ದಾರೆ. ಈ ವಿಚಾರವಾಗಿ ಪಶ್ಚಿಮ ಬಂಗಾಳವಲ್ಲದೇ ಇತರ ದೇಶದ ಮಹಿಳೆಯರು ಆಕ್ರೋಶಗೊಂಡಿದ್ದಾರೆ. ಮಹಿಳೆಯರ ಈ ಆಕ್ರೋಶದ ಬಿರುಗಾಳಿ ದೇಶದ ಎಲ್ಲೆಡೆ ವ್ಯಾಪಿಸಲಿದ್ದು, ತೃಣಮೂಲ ಕಾಂಗ್ರೆಸ್ ಪಕ್ಷವನ್ನು ನಾಶ ಮಾಡಲಿದೆ’ ಎಂದು ಹೇಳಿದ್ದಾರೆ.
ಇನ್ನು ಓಲೈಕೆ ರಾಜಕಾರಣದಲ್ಲಿ ತೊಡಗಿರುವ ಟಿಎಂಸಿ ಪಕ್ಷವು ಕ್ರಿಮಿನಲ್ಗಳನ್ನು ರಕ್ಷಣೆ ಮಾಡುತ್ತಿದೆ. ಇದ್ದರಿಂದ ಪುತ್ರಿಯರಿಗೆ, ಸಹೋದರಿಯರಿಗೆ ಎಂದಿಗೂ ಟಿಎಂಸಿ ಸರ್ಕಾರ ರಕ್ಷಣೆ ನೀಡುವುದಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.