ನವದೆಹಲಿ, ಮಾ 06(DaijiworldNews/SK): ಅಣೆಕಟ್ಟುಗಳ ಸುರಕ್ಷತೆಗೆ ಕೇಂದ್ರವೊಂದನ್ನು ಆರಂಭಿಸಲು (‘ಅಣೆಕಟ್ಟುಗಳ ಉತ್ಕೃಷ್ಟತೆಗಾಗಿನ ಅಂತರರಾಷ್ಟ್ರೀಯ ಕೇಂದ್ರ – ಐಸಿಇಡಿ) ಕೇಂದ್ರ ಜಲ ಆಯೋಗವು (ಸಿಡಬ್ಲ್ಯುಸಿ) ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಪ್ರಕಟನೆಯಲ್ಲಿ ಮಾಹಿತಿ ನೀಡಿದ ಜಲ ಶಕ್ತಿ ಸಚಿವಾಲವು, ಈ ಒಪ್ಪಂದವು ಹತ್ತು ವರ್ಷಗಳ ಅವಧಿಯವರೆಗೆ ಜಾರಿಯಲ್ಲಿ ಇರುತ್ತದೆ. ರಾಷ್ಟ್ರ ಮಟ್ಟದಲ್ಲಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಣೆಕಟ್ಟುಗಳ ರಕ್ಷಣೆಯ ವಿಚಾರದಲ್ಲಿ ಎದುರಾಗುವ ಸವಾಲುಗಳಿಗೆ ಐಸಿಇಡಿ ಕೇಂದ್ರವು ಪರಿಹಾರ ಒದಗಿಸಲು ನೆರವಾಗಲಿದೆ ಎಂದು ತಿಳಿಸಿದೆ.
ಇನ್ನು ಅಣೆಕಟ್ಟುಗಳ ಸುರಕ್ಷತ ಕೇಂದ್ರದ ಸ್ಥಾಪನೆಗೆ ಜಲ ಶಕ್ತಿ ಸಚಿವಾಲಯವು 118.05 ಕೋಟಿ ರೂ ಅನುದಾನ ಒದಗಿಸಲಿದೆ. ಕೇಂದ್ರದ ಚಟುವಟಿಕೆಗಳಲ್ಲಿ ಐಐಎಸ್ಸಿ ಸಂಸ್ಥೆಯು ಪ್ರಮುಖ ಪಾತ್ರವನ್ನು ನಿಭಾಯಿಸಲಿದೆ ಎಂದು ತಿಳಿಸಿದೆ.