ಹೊಸದಿಲ್ಲಿ,,ಏ29(DaijiworldNews/AZM): ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಸುಪ್ರೀಂ ಕೋರ್ಟ್ ನೋಟೀಸಿಗೆ ಇಂದು ಪ್ರತಿಕ್ರಿಯೆ ನೀಡಿದ್ದು, "ಸುಪ್ರೀಂ ಕೋರ್ಟ್ ಕೂಡಾ ಚೌಕಿದಾರ್ ಚೋರ್ ಹೈ ಎಂದು ತನ್ನ ತೀರ್ಪಿನಲ್ಲಿ ಹೇಳಿದೆ" ಎಂಬ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಲಿಖಿತ ಉತ್ತರದಲ್ಲಿ ಹೇಳಿಕೆ ನೀಡಿದ ಅವರು,'ಚೌಕೀದಾರ್ ಚೋರ್ ಹೈ ಎಂದು ಸುಪ್ರೀಂ ಕೋರ್ಟ್ ಕೂಡ ತನ್ನ ತೀರ್ಪಿನಲ್ಲಿ ಹೇಳಿದೆ' ಎಂಬ ತನ್ನ ಪ್ರಮಾದಯುಕ್ತ ಹೇಳಿಕೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ಘನತೆ-ಗೌರವವನ್ನು ಕುಂದಿಸುವ ಅಥವಾ ಅದನ್ನು ರಾಜಕೀಯ ಕದನಕ್ಕೆ ಎಳೆದು ತರುವ ಕಿಂಚಿತ್ ದುರುದ್ದೇಶವಾಗಲೀ, ಹಂಬಲವಾಗಲೀ ಅಥವಾ ಆ ರೀತಿಯ ಆಲೋಚನೆಯಾಗಲೀ ತನಗಿರಲಿಲ್ಲ ಎಂದು ಹೇಳಿದ್ದಾರೆ
ರಫೇಲ್ ಕುರಿತಾದ ಸಂಕ್ಷಿಪ್ತ ಹೇಳಿಕೆಯನ್ನು ಮಾಧ್ಯಮದವರಿಗೆ ನೀಡುವ ಮುನ್ನ ತಾನು ಬಿರುಸಿನ ಚುನಾವಣಾ ಪ್ರಚಾರಾಭಿಯಾನದಲ್ಲಿ ತೊಡಗಿಕೊಂಡಿದ್ದ ಆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಕಂಡದ್ದಾಗಲೀ, ಓದಿದ್ದಾಗಲೀ, ವಿಶ್ಲೇಷಿಸಿದ್ದಾಗಲೀ ಇಲ್ಲ ಎಂದು ರಾಹುಲ್ ತಮ್ಮ ಉತ್ತರದಲ್ಲಿ ಹೇಳಿದ್ದಾರೆ.
ರಫೇಲ್ ತೀರ್ಪು ಕುರಿತ ಹೇಳಿಕೆಗಾಗಿ ನ್ಯಾಯಾಂಗ ನಿಂದನೆ ಕೇಸಿಗೆ ರಾಹುಲ್ ಗಾಂಧಿಯವರು ಗುರಿಯಾಗಿದ್ದರು.