ಬೆಂಗಳೂರು, ಮಾ 07 (DaijiworldNews/MS): ಅಬಕಾರಿ ನೀತಿ ಸಂಬಂಧಿತ ಪ್ರಕರಣದಲ್ಲಿ ಇದುವರೆಗೆ ಎಂಟು ಜಾರಿ ನಿರ್ದೇಶನಾಲಯದ ಸಮನ್ಸ್ಗಳನ್ನು ತಪ್ಪಿಸಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ತಾವು ಬಿಜೆಪಿಗೆ ಸೇರಿದರೆ ತಮಗೆ ನೀಡುವ ನೋಟಿಸ್ಗಳು ನಿಲ್ಲುತ್ತವೆ" ಎಂದು ಬುಧವಾರ ಹೇಳಿದ್ದಾರೆ.
"ನಾನು ಸಮನ್ಸ್ ನಿಂದ ಪಾರಾಗಬೇಕಾದರೆ ಬಿಜೆಪಿ ಸೇರಬೇಕು, ಇಲ್ಲದಿದ್ದರೆ ಜಾರಿ ನಿರ್ದೇಶನಾಲಯದಿಂದ ನಿರಂತರ ಸಮನ್ಸ್ ಬರುತ್ತಲೇ ಇರುತ್ತದೆ" ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಆಪಾದಿತ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಯಲ್ಲಿ ತನ್ನ ಸಮನ್ಸ್ಗಳನ್ನು ತಪ್ಪಿಸಿದ್ದಕ್ಕಾಗಿ ತನ್ನ ಪ್ರಾಸಿಕ್ಯೂಷನ್ ಕೋರಿ ದೆಹಲಿ ನ್ಯಾಯಾಲಯದ ಮುಂದೆ ಇಡಿ ಹೊಸ ದೂರನ್ನು ಸಲ್ಲಿಸಿದ ನಂತರ ಕೇಜ್ರಿವಾಲ್ ಅವರ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಚುನಾವಣೆಯಲ್ಲಿ ಭಾಗವಹಿಸಬಾರದು ಎಂಬ ಉದ್ದೇಶ ಇರಿಸಿಕೊಂಡೇ ಬಿಜೆಪಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ತನ್ನ ಕೈಗೊಂಬೆಯಂತೆ ಕುಣಿಸುತ್ತಿದೆ.ಇದರೊಂದಿಗೆ ಇಡಿ ಮತ್ತು ಮೋದಿ ಸರ್ಕಾರದ ಸತ್ಯ ಜನರಿಗೆ ಗೊತ್ತಾಗುತ್ತಿದೆ. ಇಡಿಯಿಂದ ಕಿರುಕುಳ ಪಡೆದು ಅನೇಕ ಮಂದಿ ಬಿಜೆಪಿಗೆ ಹೇಗೆ ಸೇರ್ಪಡೆಯಾಗಿದ್ದಾರೆ. ಇಡಿ ರೇಡ್ ಮಾಡಿದ ನಂತರ ಅಧಿಕಾರಿಗಳಿಗೆ ನೀವು ಎಲ್ಲಿಗೆ ಹೋಗುತ್ತೀರಿ. ಬಿಜೆಪಿ ಅಥವಾ ಜೈಲಿಗೆ? ಪ್ರಶ್ನೆ ಕೇಳಲಾಗುತ್ತದೆ, ಒಂದು ವೇಳೆ ಬಿಜೆಪಿಗೆ ಹೋಗಲು ಒಪ್ಪದವರನ್ನು ಜೈಲಿಗೆ ಕಳುಹಿಸುತ್ತಾರೆ ಎಂದು ಅರೋಪಿಸಿದ್ದಾರೆ.