ಚಿಕ್ಕಮಗಳೂರು,ಏ29(DaijiworldNews/AZM): ಚಿಕ್ಕಮಗಳೂರಿನಲ್ಲಿ ಇಂದು ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ ಅಲ್ಲದೆ ತೇಗೂರಿನಲ್ಲಿ ಏಕಾಏಕಿ ಬಡಿದ ಸಿಡಿಲಿಗೆ ದಂಪತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು ಮಂಜುನಾಥ್ ಆಚಾರ್ (50) ಹಾಗೂ ಭಾರತಿ (43) ಎಂದು ಗುರುತಿಸಲಾಗಿದೆ. ಮೃತ ದಂಪತಿಗಳಿಬ್ಬರು ಬೆಳಗ್ಗೆಯಿಂದ ಸಂಜೆವರೆಗೆ ತೇಗೂರು ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮಾಡಿ, ನಂತರ ಮಳೆ ಬರುತ್ತಿದ್ದರಿಂದ ಮೇಯಲು ಬಿಟ್ಟಿದ್ದ ಹಸುಗಳನ್ನ ಹೊಡೆದುಕೊಂಡು ಮನೆಗೆ ಬರುವ ವೇಳೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
35-38 ಡಿಗ್ರಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಚಿಕ್ಕಮಗಳೂರು ಜನರು, ಏಕಾಏಕಿ ಸುರಿದ ಭಾರೀ ಗುಡುಗು-ಸಿಡಿಲು ಸಮೇತ ಮಳೆ ಕಂಡು ಆತಂಕಕ್ಕೊಳಗಾದರು.ಮತ್ತೊಂದು ಕಡೆ ತೋಟಗಾರಿಕೆ ಹಾಗೂ ಕೃಷಿಗೆ ಮಳೆಯ ಅಗತ್ಯವಿದ್ದು,ಈ ಮಳೆ ನೋಡಿ ರೈತರು ಖುಷಿಪಟ್ಟಿದ್ದಾರೆ.