ನವದೆಹಲಿ,ಏ29(DaijiworldNews/AZM): ದಿನದಿಂದ ದಿನಕ್ಕೆ ತನ್ನ ತೀವ್ರತೆಯನ್ನು ಹೆಚ್ಚಿಸುತ್ತಿರುವ ಫನಿ ಚಂಡಮಾರುತ ಸದ್ಯ ಗಂಟೆಗೆ 120 ಕಿ.ಮೀ. ವೇಗದಲ್ಲಿ ಸಾಗುತ್ತಿದ್ದೆ. ಈ ಹಿನ್ನಲೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಹವಾಮಾನ ಇಲಾಖೆ ತಿಳಿಸಿದೆ.
ಮತ್ತಷ್ಟು ತೀವ್ರತೆಯನ್ನು ಹೆಚ್ಚಿಸಿರುವ ಫನಿ' ಚಂಡಮಾರುತ ಮೇ.೪ರ ವೇಳೆಗೆ ಪುರಿ ಪ್ರವೇಶಿಸುವ ಸೂಚನೆ ಇದ್ದು,ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಮುಖ್ಯ ಕಾರ್ಯದರ್ಶಿಗಳಿಗೆ ಹವಾಮಾನ ಇಲಾಖೆ ಸೂಚನೆ ನೀಡಲಾಗಿದೆ.
ಫನಿ ಚಂಡಮಾರುತದ ತೀವ್ರತೆ ಗುರುವಾರದ ವೇಳೆಗೆ ಗಂಟೆಗೆ 195 ಕಿ.ಮೀ. ವೇಗ ಪಡೆದುಕೊಳ್ಳಲಿದೆ. ಹಾಗೂ ಅದು ಒಡಿಶಾ ಕರಾವಳಿ ಪ್ರದೇಶ ಪ್ರವೇಶಿಸಲಿದೆ. ಹಾಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ಮತ್ತು ಭಾರತೀಯ ಕರಾವಳಿ ರಕ್ಷಣಾ ಪಡೆಗೆ ಸನ್ನದ್ಧವಾಗಿರುವಂತೆ ಹಮಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೂ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಲಾಗಿದೆ.