ಪುಣೆ,ಏ29(DaijiworldNews/AZM):ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹ ಸ್ಥಾಪಕ ಯಾಸಿನ್ ಭಟ್ಕಳ್ ವಿರುದ್ಧ ಇಂದು ಪುಣೆ ಕೋರ್ಟ್ ನಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಜರ್ಮನ್ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾಸಿನ್ ಭಟ್ಕಳ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಇಂದು ಬಿಗಿ ಭದ್ರತೆಯೊಂದಿಗೆ ಯಾಸಿನ್ ಭಟ್ಕಳ್ನನ್ನು ಕೋರ್ಟ್ಗೆ ಹಾಜರು ಪಡಿಸಲಾಯಿತು.
2010ರ ಫೆಬ್ರುವರಿಯಲ್ಲಿ ಕೊರೆಗಾಂವ ಪ್ರದೇಶದಲ್ಲಿನ ಜರ್ಮನ್ ಬೇಕರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 17 ಜನ ಅಸುನೀಗಿದ್ದರು. 64 ಮಂದಿ ಗಾಯಗೊಂಡಿದ್ದರು.