ಲಖನೌ, ಎ30(Daijiworld News/SS): ಸಮಾಜವಾದಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಮಾಜಿ ಸೈನಿಕ ತೇಜ್ ಬಹದ್ದೂರ್ ಯಾದವ್, ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸಲು ಕಣಕ್ಕಿಳಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿಜವಾದ ಚೌಕಿದಾರ. 21 ವರ್ಷ ದೇಶದ ಗಡಿಯಲ್ಲಿದ್ದು ರಕ್ಷಣೆ ಮಾಡಿದ್ದೇನೆ. ಹೀಗಾಗಿ ತಾವೇ ನಿಜವಾದ ಚೌಕಿದಾರ ಎಂದು ಹೇಳಿದ್ದಾರೆ.
ಈ ಹಿಂದೆ ನಾನು ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದೇನೆ. ಚೌಕಿದಾರ ಎಂಬ ಪದ ಮೋದಿ ಅವರಿಗೆ ಹೊಂದಿಕೆಯಾಗುವುದಿಲ್ಲ. ನಾನು ಯಾವುದೇ ಪಕ್ಷದ ಗುಲಾಮನಾಗಲು ಬಯಸುವುದಿಲ್ಲ. ಹೀಗಾಗಿ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ. ಜಯಗಳಿಸುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
ಮೋದಿ ಅವರ ಎದುರಾಳಿಯಾಗಿ ಶಾಲಿನಿ ಯಾದವ್ ಅವರನ್ನು ಎಸ್ಪಿ ಘೋಷಿಸಿತ್ತು. ಕಾಂಗ್ರೆಸ್ನಿಂದ ಬಂದಿದ್ದ ಅವರ ಸ್ಪರ್ಧೆಗೆ ಸ್ಥಳೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ಮೋದಿ ವಿರುದ್ಧ ಕಣಕ್ಕೆ ಇಳಿಸಿದೆ. ಈ ಹಿಂದೆ ಕಳಪೆ ಆಹಾರದ ವಿರುದ್ಧ ದನಿ ಎತ್ತಿದ್ದ ಬಹದ್ದೂರ್, ಬಳಿಕ ಸ್ವಯಂ ನಿವೃತ್ತಿಗೆ ಅರ್ಜಿ ಹಾಕಿದ್ದರು. ಬಿಎಸ್ಎಫ್ ನಿರಾಕರಿಸಿತ್ತು. ಇದನ್ನು ಅವರು ಪ್ರತಿಭಟಿಸಿದ್ದರು. ಅಶಿಸ್ತಿನ ಕಾರಣ ನೀಡಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು.