ಹೈದರಾಬಾದ್,ಮಾ 15(DaijiworldNews/AK): ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಿಆರ್ಎಸ್ ನಾಯಕಿ, ತೆಲಂಗಾಣದ ಮಾಜಿ ಮುಖ್ಯಮಂತ್ರಿ ಟಿ ಚಂದ್ರಶೇಖರ ರಾವ್ ಅವರ ಪುತ್ರಿ , ಬಿಎಸ್ಆರ್ ನಾಯಕಿ, ಕವಿತಾ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.
ಇಂದು ಕವಿತಾ ಅವರ ಹೈದರಾಬಾದ್ ನಿವಾಸದ ಮೇಲೆ ಇಡಿ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿತ್ತು. ಈ ವೇಳೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದ ಇಡಿ ಅಧಿಕಾರಿಗಳು ಸಂಜೆ ವೇಳೆ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಅವರನ್ನು ಅರೆಸ್ಟ್ ಮಾಡಲಾಯಿತು.ಕವಿತಾ ಅವರು 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಾವತಿಸಿದ ಮದ್ಯದ ಕಾರ್ಟೆಲ್ ‘ದಿ ಸೌತ್ ಗ್ರೂಪ್’ ನ ಭಾಗವಾಗಿದ್ದರು ಎಂದು ಇಡಿ ಆರೋಪಿಸಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾಅವರ ಆಪ್ತ ಸಹಾಯಕ ಈ ಪ್ರಕರಣದಲ್ಲಿ ಆರೋಪಿಯಾಗಿರುವ ಅಮಿತ್ ಅರೋರಾ 10ಕ್ಕೂ ಹೆಚ್ಚು ಬಾರಿ ಕವಿತಾಗೆ ದೂರವಾಣಿ ಕರೆ ಮಾಡಿದ್ದು, ಒಟ್ಟು 35 ಜನರನ್ನು ಸಂಪರ್ಕಿಸಲು ಅವರು ಪ್ರಯತ್ನಿಸಿದ್ದಾರೆ ಎಂದು ಇಡಿ ಹೇಳಿತ್ತು.
ಕೆ.ಕವಿತಾ ಅಮಿತ್ ಅರೋರಾ ಅವರೊಂದಿಗೆ ಸಂವಹನ ನಡೆಸಲು ಫ್ಯಾನ್ಸಿ ನಂಬರ್ಗಳನ್ನು ಬಳಸಿದ್ದಾರೆ. ಎರಡು ಸಿಮ್ಗಳನ್ನು ಹೆಚ್ಚು ಬಳಸಿದ್ದು, ಈ ಬಗ್ಗೆ ಸಂಭಾಷಣೆ ನಡೆಸಲು ಅವರು ಹತ್ತಕ್ಕೂ ಹೆಚ್ಚು ಬಾರಿ IMEI ಅನ್ನು ಬದಲಾಯಿಸಿದ್ದಾರೆ. ತನಿಖೆ ವೇಳೆ ಪರಿಶೀಲಿಸಿದಾಗ ಫೋನ್ಗಳಲ್ಲಿ ಡೇಟಾವನ್ನು ಅಳಿಸಿ ಹಾಕಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.ಇಡಿ ಪ್ರಕರಣದ ಚಾರ್ಜ್ಶೀಟ್ನಲ್ಲಿ ಕೆ ಕವಿತಾ ಅವರ ಹೆಸರಿಸಿದೆ. ಅವರು ಮದ್ಯದ ಕಂಪನಿಯಾದ ಇಂಡೋಸ್ಪಿರಿಟ್ಸ್ನಲ್ಲಿ ಶೇ.65 ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.