ಕೇರಳ,17(DaijiworldNews/ AK): ಯಾವುದೇ ರೀತಿಯ ತರಬೇತಿ ಪಡೆಯದೆ ತಾವೇ ಸ್ವತಃ ಓದಿಕೊಂಡು ಪಾಸ್ ಆಗುವುದು ಯಾವುದೇ ದೊಡ್ಡ ಸಾಧನೆಗಿಂತ ಕಡಿಮೆ ಇಲ್ಲ. ಇಂತಹ ಒಂದು ಸಾಧನೆಯನ್ನು ಮಾಡಿ ಎಲ್ಲರಿಗೂ ಮಾಗದರ್ಶಕರಾಗಿದ್ದಾರೆ. ಅವರ ಸಾಧನೆಯ ಹಾದಿ ಇಲ್ಲಿದೆ.
ಗಹನಾ ನವ್ಯಾ ಜೇಮ್ಸ್ ಅವರು ಕೋಚಿಂಗ್ ಇಲ್ಲದೆಯೇ ತಾವೇ ಸ್ವತಃ ಓದಿಕೊಂಡು ಈ ಪರೀಕ್ಷೆಯನ್ನು ಪಾಸ್ ಮಾಡಿದ್ದಾರೆ. ಗಹನಾ ನವ್ಯಾ ಜೇಮ್ಸ್ ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾ ಮೂಲದವರು.ಯುಪಿಎಸ್ಸಿ ಪರೀಕ್ಷೆಯಲ್ಲಿ 6ನೇ ರ್ಯಾಂಕ್ ಪಡೆದು ಪಾಸಾದ ಅಧಿಕಾರಿಗಹನಾ ನವ್ಯಾ ಜೇಮ್ಸ್ ಅವರು 2022 ರಲ್ಲಿ ಯುಪಿಎಸ್ಸಿ ಪರೀಕ್ಷೆಯನ್ನು 6ನೇ ರ್ಯಾಂಕ್ ಪಡೆಯುವುದರೊಂದಿಗೆ ಪಾಸ್ ಆದರು. ಯಾವುದೇ ಕೋಚಿಂಗ್ ಇಲ್ಲದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ನಿಜಕ್ಕೂ ಸಾಧನೆಯೇ ಸರಿ.
ಜೇಮ್ಸ್ ತಮ್ಮ ಪರೀಕ್ಷೆಯ ತಯಾರಿಗಾಗಿ ದಿನಪತ್ರಿಕೆಗಳನ್ನು ಸಂಪೂರ್ಣವಾಗಿ ಅವಲಂಬಿಸಿದ್ದರು.ಅವರು ಪಾಲಾದ ಅಲ್ಫೋನ್ಸಾ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿಎ ಪದವಿಯನ್ನು ಅಧ್ಯಯನ ಮಾಡಿದರು. ಬಳಿಕ ರಾಜ್ಯಶಾಸ್ತ್ರ ವಿಷಯದಲ್ಲಿ ತಮ್ಮ ಎಂಎ ವ್ಯಾಸಂಗ ಮಾಡಲು ಸೇಂಟ್ ಥಾಮಸ್ ಕಾಲೇಜಿಗೆ ಹೋದರು.ಯುಜಿಸಿ ನೆಟ್ ಪರೀಕ್ಷೆಯಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ ಪಡೆದ ನಂತರ ಅವರು ‘ಇಂಟರ್ನ್ಯಾಷನಲ್ ರಿಲೇಷನ್ಸ್’ ವಿಷಯದಲ್ಲಿ ಪಿಎಚ್ಡಿ ಸಹ ಪಡೆದರು.
ತಮ್ಮ ಚಿಕ್ಕಪ್ಪ ಐಎಫ್ಎಸ್ ಅಧಿಕಾರಿ ಸಿಬಿ ಜಾರ್ಜ್ ಅವರಿಂದ ಸ್ಫೂರ್ತಿ ಪಡೆದ ಗಹನಾ ನವ್ಯಾ ಕೂಡ ಯುಪಿಎಸ್ಸಿ ಪರೀಕ್ಷೆ ಪಾಸಾಗಿ ಐಎಎಸ್ ಬದಲಿಗೆ ಐಎಫ್ಎಸ್ ಅಧಿಕಾರಿಯಾಗಲು ನಿರ್ಧರಿಸಿದರು.