ಬಿಹಾರ, 17(DaijiworldNews/ AK): ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಸ್ಪರ್ಧಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ನಡೆಸುತ್ತಿದ್ದವೆ. ಈಗ ಬಿಹಾರದ ಸರನ್ ಲೋಕಸಭಾ ಕ್ಷೇತ್ರದಿಂದ ಲಾಲೂ ಪ್ರಸಾದ್ ಯಾದವ್ ಪುತ್ರಿ ಆರ್ಜೆಡಿ ಕಾರ್ಯಕರ್ತೆ ರೋಹಿಣಿ ಆಚಾರ್ಯ ಅವರನ್ನು ಕಣಕ್ಕಿಳಿಸಲು ಚರ್ಚೆ ನಡೆಯುತ್ತಿದೆ. ಆರ್ಜೆಡಿ ತನ್ನ ಅಭ್ಯರ್ಥಿಗಳನ್ನು ಇನ್ನೂ ಘೋಷಿಸಿಲ್ಲ.ಸರನ್ನಿಂದ ರೋಹಿಣಿಯವರನ್ನು ಕಣಕ್ಕಿಳಿಸುವ ಕುರಿತು ಆರ್ಜೆಡಿ ಎಂಎಲ್ಸಿ ಸುನೀಲ್ ಕುಮಾರ್ ಸಿಂಗ್, ಸಿಂಗಾಪುರದಲ್ಲಿ ನೆಲೆಸಿರುವ ರೋಹಿಣಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ.
ತಮ್ಮ ಮಗಳು ರೋಹಿಣಿ ತನ್ನ ಕಿಡ್ನಿಯನ್ನು ದಾನ ಮಾಡುವ ಮೂಲಕ ತನ್ನ ಜೀವವನ್ನು ಉಳಿಸಿದ್ದಾಳೆ ಎಂದು ಅವರು ಪ್ರತಿ ಬಾರಿಯೂ ಅನೇಕ ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. ಇದೀಗ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಶೀಘ್ರದಲ್ಲೇ ಚುನಾವಣಾ ಅಖಾಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸರನ್ ಆರ್ಜೆಡಿ ಗೆದ್ದ ಕ್ಷೇತ್ರವಾಗಿದೆ.