ದೆಹಲಿ, ಮಾ 18(DaijiworldNews/AA): ಭಾರತ್ ರಾಷ್ಟ್ರ ಸಮಿತಿ(ಬಿಆರ್ ಎಸ್) ನಾಯಕಿ ಕೆ.ಕವಿತಾ ಅವರು ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಉನ್ನತ ನಾಯಕರೊಂದಿಗೆ ಸಂಚು ರೂಪಿಸಿದ್ದು, ಎಎಪಿ ನಾಯಕರಿಗೆ 100 ಕೋಟಿ ರೂ. ಕೊಟ್ಟಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಇಂದು ಆರೋಪ ಮಾಡಿದೆ.
ಕವಿತಾ ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಸೇರಿದಂತೆ ಎಎಪಿಯ ಉನ್ನತ ನಾಯಕರ ಜೊತೆ ದೆಹಲಿ ಅಬಕಾರಿ ನೀತಿ-ರೂಪಿಸುವಿಕೆ ಹಾಗೂ ಅನುಷ್ಠಾನದಲ್ಲಿ ಒಲವು ಪಡೆಯಲು ಪಿತೂರಿ ನಡೆಸಿದ್ದಾರೆ. ಈ ಅನುಕೂಲಗಳಿಗೆ ಪ್ರತಿಯಾಗಿ ಕವಿತಾ ಅವರು ಎಎಪಿ ನಾಯಕರಿಗೆ 100 ಕೋಟಿ ರೂ ಹಣ ಪಾವತಿ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ.
ಕವಿತಾ ಅವರು ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿಯಾಗಿದ್ದು, ಕಳೆದ ವಾರ ಇಡಿ ಅವರನ್ನು ಬಂಧಿಸಿತ್ತು. ಮಾರ್ಚ್ 23 ರವರೆಗೆ ಅವರು ತನಿಖಾ ಸಂಸ್ಥೆಯ ವಶದಲ್ಲಿರುತ್ತಾರೆ.