ಲಖಿಂಪುರ ಕೆರಿ, ಎ30(Daijiworld News/SS): ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಪಾಕಿಸ್ತಾನಿಯರು ಭಾರತೀಯ ಯೋಧರ ಶಿರಚ್ಛೇದನ ಮಾಡಿಕೊಂಡು ಹೋಗುತ್ತಿದ್ದರು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲೇ ಸುಳ್ಳು ಇದೆ. ನಾವು ನ್ಯಾಯ ಒದಗಿಸುತ್ತೇವೆಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ನಾವು ಕೇಳಸು ಬಯಸುವುದು ಇಷ್ಟೆ. ಮೊದಲಿನಿಂದಲೂ ಇಲ್ಲಿಯ ಜನತೆಗೆ ಅನ್ಯಾಯ ಮಾಡಿರುವ ನೀವು, ಈಗ ಎಂಥ ನ್ಯಾಯ ನೀಡುತ್ತಿರಿ ಎಂದು ಪ್ರಶ್ನಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ 5 ವರ್ಷದ ಸಾಧನೆ ಹಾಗೂ ಕಾಂಗ್ರೆಸ್ನ 55 ವರ್ಷದ ಸಾಧನೆ ಮತ್ತು ಉತ್ತರ ಪ್ರದೇಶ ಬಿಜೆಪಿಯ ಎರಡು ವರ್ಷ ಹಾಗೂ ಎಸ್ಪಿ-ಬಿಎಸ್ಪಿಯ 17 ವರ್ಷದ ಸಾಧನೆಯನ್ನು ತುಲನೆ ಮಾಡಿ ನೋಡಿದರೆ, ಬಿಜೆಪಿ ಹೆಚ್ಚು ತೂಗುವುದು ಎಂದು ಹೇಳಿದರು.
ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ಪಾಕಿಸ್ತಾನಿಯರು ಭಾರತೀಯ ಯೋಧರ ಶಿರಚ್ಛೇದನ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಈಗ ಯೋಧರು ಹುತಾತ್ಮರಾದರೆ, ಪಾಕ್ಗೆ ನುಗ್ಗಿ ಹೊಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.