ಬೆಂಗಳೂರು, ಮಾ 19(DaijiworldNews/AK): ದೇವೇಗೌಡರು ಅಳಿಯ ಡಾ.ಮಂಜುನಾಥ್ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುತ್ತಿರುವುದು ಜೆಡಿಎಸ್ಗೆ ಮೊದಲ ಆತ್ಮಹತ್ಯೆ ಯತ್ನದಂತಾಗಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಮೈತ್ರಿ ಬಗ್ಗೆ ಹೆಚ್ಡಿಕೆ ಅಸಮಾಧಾನದ ಕುರಿತು ಮಾತನಾಡಿದ ಡಿಕೆಶಿ, ಮಾಜಿ ಪ್ರಧಾನಿ ಜೆಚ್.ಡಿ ದೇವೇಗೌಡರ ಅಳಿಯ ಡಾ. ಸಿ.ಎನ್ ಮಂಜುನಾಥ್ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ನಮಗೆ ಮೊದಲಿಂದಲೇ ಇದು ವಿಚಾರ ಗೊತ್ತಿತ್ತು. ಯಾವಾಗ ದೇವೆಗೌಡರು ಯಾಕೆ ಅವರ ಅಳಿಯನನ್ನ ಬಿಜೆಪಿ ಚಿಹ್ನೆಯಿಂದ ನಿಲ್ಲಿಸಿದರೋ ಅದು ಫಸ್ಟ್ ಸುಸೈಡ್ ಅಟೆಂಪ್ಟ್ ಆಫ್ ಜೆಡಿಎಸ್ ಎಂದು ಹೇಳಿದ್ದಾರೆ.
ಅವರ ಪಕ್ಷಕ್ಕೆ ಮುಜುಗರ ಉಂಟಾಗಿದೆ. ಅವರದ್ದೇ ಆದ ಸ್ಟ್ರೆಂತ್ ಇತ್ತು. ಕೆಲವು ಕಡೆ ಒಂದು ಎರಡು ಶಾಸಕರಿದ್ದರು, ಸಂಸದರಿದ್ದರು. ಬಿಜೆಪಿ ಸ್ಟೈಲೇ ಅದು ಇದೊಂದೇ ರಾಜ್ಯ ಅಲ್ಲ, ಬೇರೆ ರಾಜ್ಯದಲ್ಲೂ ಇದೇ ರೀತಿ ನಡೆದುಕೊಂಡು ಬರುತ್ತಿದೆ ಎಂದರು.
ಡಾ.ಮಂಜುನಾಥ್ ಬಿಜೆಪಿಯಿಂದ ಸ್ಪರ್ಧೆ ಕಾರಣಕ್ಕೆ ಜೆಡಿಎಸ್ ಪಕ್ಷವೆ ಅಸ್ತಿತ್ವ ಕಳೆದುಕೊಳ್ಳುವಂತಾಗಿದೆ ಎಂದು ಹೇಳುವ ಮೂಲಕ ಡಾ.ಮಂಜುನಾಥ್ ಬದಲು ಡಿಕೆಶಿ ನೇರವಾಗಿ ದೇವೇಗೌಡರು ಹಾಗೂ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು.