ನವದೆಹಲಿ, ಮಾ 21(DaijiworldNews/ AK): ಎಸ್ಬಿಐಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಚುನಾವಣಾ ಬಾಂಡ್ಗಳ ಎಲ್ಲಾ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ.
ಬಾಂಡ್ ಖರೀದಿಸಿದವರ ಹೆಸರು, ವಿವಿಧ ಬಾಂಡ್ಗಳ ನಿರ್ದಿಷ್ಟ ಸಂಖ್ಯೆ, ಬಾಂಡ್ ನಗದೀಕರಿಸಿದ ಪಕ್ಷ, ರಾಜಕೀಯ ಪಕ್ಷಗಳ ಬ್ಯಾಂಕ್ ಖಾತೆಗಳ ಕೊನೆಯ ನಾಲ್ಕು ಸಂಖ್ಯೆಯನ್ನು ತೋರಿಸುವ ಮಾಹಿತಿಗಳನ್ನು ಒಳಗೊಂಡಿದೆ. ಸಂಪೂರ್ಣ ಖಾತೆ ಸಂಖ್ಯೆಗಳು, ಕೆವೈಸಿ ವಿವರ ಸೇರಿದಂತೆ ಯಾವುದೇ ಮಾಹಿತಿಯನ್ನು ರಹಸ್ಯವಾಗಿ ಇರಿಸಿಲ್ಲ ಎಂದು ಎಸ್ಬಿಐ ಅಫಿಡವಿಟ್ನಲ್ಲಿ ಸ್ಪಷ್ಟಪಡಿಸಿದೆ.
ಬ್ಯಾಂಕ್ ನೀಡಿರುವ ವಿವರಗಳನ್ನು ಚುನಾವಣಾ ಆಯೋಗವು ಶೀಘ್ರದಲ್ಲೇ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವ ಸಾಧ್ಯತೆ ಇದೆ