ಬೆಂಗಳೂರು,ಏ30(DaijiworldNews/AZM):ಏತಾನು ಅನುತ್ತೀರ್ಣನಾಗುವೆ ಎನ್ನುವ ಭಯದಿಂದ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯೋರ್ವ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಡಿಸ್ಟ್ರೀಂಕ್ಷನ್ ನಲ್ಲಿ ಪಾಸಾಗಿದ್ದು, ಈ ಸಿಹಿ ಸುದ್ದಿ ಕೇಳಲು ಆ ಜೀವ ಈಗ ಇಲ್ಲವಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಗಂಗವಾರ ಗ್ರಾಮದ ನಂದನ್ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ದುಡುಕಿನ ಫಲ ಆತನ ಜೀವವನ್ನೇ ತೆಗೆದು ಬಿಟ್ಟಿದೆ. ಇಂದು ಪ್ರಕಟಗೊಂಡ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625ಕ್ಕೆ 530 ಅಂಕ ಪಡೆದು ನಂದನ್ ಡಿಸ್ಟ್ರೀಂಕ್ಷನ್ ಅಲ್ಲಿ ಪಾಸಾಗಿದ್ದಾನೆ. ಆದರೇನು ಪ್ರಯೋಜನ? ಆ ಜೀವ ಈಗ ಇಲ್ಲ. ಇಂತಹ ಪರೀಕ್ಷೆಗಳು ಹಲವು ಬಾರಿ ಬರೆಯಬಹುದು. ಆದ್ರೆ ಒಮ್ಮೆ ಹೋದ ಜೀವ ಮತ್ತೆ ಬರಲ್ಲ ಎನ್ನುವುದನ್ನು ಯೋಚಿಸಲೇಬೇಕು