ವಿಜಯಪುರ, ಮಾ 25(DaijiworldNews/AK): ಕಠಿಣ ಪ್ರರಿಶ್ರಮ ಮತ್ತು ಶ್ರದ್ಧೆ ಇದ್ದರೆ ಸಾಕು ಯಾವ ಮಾಧ್ಯಮದಲ್ಲೂ ಕನಸನ್ನು ನನಸು ಮಾಡಬಹುದು ಎಂಬುದಕ್ಕೆ ಬಸವನಾಡು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸರೂರ ತಾಂಡಾದ ಯುವಕ ಯಲಗೂರೇಶ ನಾಯಕ ಅವರೇ ಬೆಸ್ಟ್ ಉದಾಹರಣೆ.
ಕನ್ನಡ ಮಾಧ್ಯಮದಲ್ಲಿ ಯು ಪಿ ಎಸ್ ಸಿ ಪರೀಕ್ಷೆ ಪಡೆದು ರಾಷ್ಟ್ರ ಮಟ್ಟದಲ್ಲಿ 890ನೇ ಸ್ಥಾನ ಪಡೆದಿರುವ ಯುವಕ ಯಲಗೂರೇಶ. ಬಡಕುಟುಂಬಕ್ಕೆ ಸೇರಿದ ಯುವಕ ಬಾಲ್ಯದಿಂದಲೂ ಪ್ರತಿಭಾವಂತನಾಗಿದ್ದು, ಸರಕಾರಿ ಶಾಲೆ ಮತ್ತು ಬಾಲಕರ ವಸತಿ ನಿಲಯದಲ್ಲಿ ಇದ್ದುಕೊಂಡು ಶಿಕ್ಷಣ ಮುಗಿಸಿದ್ದಾರೆ.
1ರಿಂದ 5ನೇ ತರಗತಿ ವರೆಗೆ ಸರೂರ ತಾಂಡಾದ ಸರಕಾರಿ ಶಾಲೆಯಲ್ಲಿಯೇ ಓದಿರುವ ಯಲಗೂರೇಶ ನಾಯಕ 6ನೇ ತರಗತಿಯಿಂದ 20ನೇ ತರಗತಿಯವರೆಗೆ ಮುದ್ದೇಬಿಹಾಳ ಪಟ್ಟಣದಲ್ಲಿರುವ ಸಂತ ಕನಕದಾಸ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದಾನೆ.
ನಂತರ ಅದೇ ಪಟ್ಟಣದ ಎಂ. ಜಿ. ವಿ. ಸಿ ಕಾಲೇಜಿನಲ್ಲಿ ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿದ್ದಾನೆ. 2018ರಲ್ಲಿ ಬಿ. ಕಾಂ. ಪದವಿ ಪೂರ್ಣಗೊಳಿಸಿದ ನಾಯಕ ಕಾಲೇಜಿಗೆ ಪ್ರಥಮ ಸ್ಥಾನ ಪಡೆದು ಗಮನ ಸೆಳೆದಿದ್ದ. ನಂತರ ಬೆಂಗಳೂರಿಗೆ ತೆರಳಿದ ಯಲಗೂರೇಶ ಯು. ಪಿ. ಎಸ್. ಸಿ ಗಾಗಿ ಬೆಂಗಳೂರಿನ ಅತ್ತಿಗುಪ್ಪೆ ಮೆಟ್ರೋ ಸ್ಟೇಶನ್ ಸಮೀಪದ ಗ್ರಂಥಾಲಯದಲ್ಲಿ ಓದಿ ಪರೀಕ್ಷೆಯಲ್ಲಿ ಪಾಸಾಗುವ ಮೂಲಕ ಸಾಧನೆ ಮಾಡಿದ್ದಾರೆ.
ನನಗೆ ನಾಗರಿಕ ಸೇವೆ ಎಂದರೆ ಬಲು ಇಷ್ಟ. 2019ರಲ್ಲೆ ಯು. ಪಿ. ಎಸ್. ಸಿ ಪರೀಕ್ಷೆ ಬರೆಯಲು ಮುಂದಾದ ಯಲಗೂರೇಸ್ ಬಳಿಕ 2020, 2021ರಲ್ಲಿ ಪರೀಕ್ಷೆ ಬರೆದರು. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಯು. ಪಿ. ಎಸ್. ಸಿ. ಪಾಸಾಗಿದ್ದೇನೆ. ಪ್ರತಿದಿನ 6 ರಿಂದ 7 ಗಂಟೆಗಳ ಕಾಲ ವಿದ್ಯಾಭ್ಯಾಸ ಮಾಡುತ್ತಿದ್ದೆ. ವಿಶೇಷವಾಗಿ ಯಾವುದೇ ಕೋಚಿಂಗ್ ಸೆಂಟರ್ಗೆ ಹೋಗಿಲ್ಲ. ನನ್ನ ಮೆಚ್ಚಿನ ಕನ್ನಡ ಭಾಷೆಯಲ್ಲಿಯೇ ಪರೀಕ್ಷೆ ಬರೆದಿದ್ದೇನೆ. ಸ್ವಲ್ಪ ಕಠಿಣ ಎನಿಸಿದರೂ ಪರಿಶ್ರಮದಿಂದ ಓದಿದರೆ ಕನ್ನಡದಲ್ಲೂ ಸಾಧನೆ ಮಾಡಬಹುದು ಎಂಬುದನ್ನು ಯಲಗೂರೇಶ ತೋರಿಸಿ ಕೊಟ್ಟಿದ್ದಾರೆ.