ಹರಿಯಾಣ, ಮಾ 27(DaijiworldNews/ AK):ಕೇವಲ 22ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪ್ರಸ್ತುತ IPS ಅಧಿಕಾರಿಯಾಗಿರುವ ಹೆಡ್ ಕಾನ್ ಸ್ಟೆಬಲ್ ಅವರ ಪುತ್ರಿ ಪ್ರೀತಿ ಯಾದವ್ ನಿಜಕ್ಕೂ ಮಾದರಿ. ಅವರ ಯಶಸ್ಸಿನ ಹಾದಿಯ ಒಂದು ನೋಟ ಇಲ್ಲಿದೆ.
ಪ್ರೀತಿ ಯುಪಿ ಕೇಡರ್ ನ 2019 ರ ಬ್ಯಾಚ್ ಐಪಿಎಸ್ ಅಧಿಕಾರಿ. ಅವರು ಹರಿಯಾಣದ ರೆವಾರಿ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಮುಖೇಶ್ ಯಾದವ್ ಚಂಡೀಗಢ ಪೊಲೀಸ್ ನಲ್ಲಿ ಹೆಡ್ ಕಾನ್ ಸ್ಟೆಬಲ್ ಆಗಿದ್ದಾರೆ.ಪ್ರೀತಿ ಯಾವಾಗಲೂ ಅಧ್ಯಯನದಲ್ಲಿ ಚುರುಕಾಗಿದ್ದರು. ಮಾನವಿಕ ವಿಭಾಗದಲ್ಲಿ 96.2% ಅಂಕಗಳನ್ನು ಗಳಿಸುವ ಮೂಲಕ 12ನೇ ಸ್ಥಾನ ಪಡೆದಿದ್ದಾರೆ.
ಅಷ್ಟೇ ಅಲ್ಲ ಪದವಿಯಲ್ಲೂ ಚಿನ್ನದ ಪದಕ ಪಡೆದಿದ್ದಾರೆ. ಅವರು ಭೂಗೋಳಶಾಸ್ತ್ರದಲ್ಲಿ ಬಿಎ ಪದವಿಯನ್ನು ಪಡೆದಿದ್ದಾರೆ.ತನ್ನ ಯುಜಿ ಓದುವ ಸಮಯದಲ್ಲಿ, ಅವರು UPSC ಪರೀಕ್ಷೆಗೆ ತಯಾರಿ ಆರಂಭಿಸಿದರು. ತಯಾರಿಗಾಗಿ, ಅವರು ತಮ್ಮ ಸ್ನಾತಕೋತ್ತರ ಅಧ್ಯಯನವನ್ನು ಮಧ್ಯದಲ್ಲಿಯೇ ಬಿಟ್ಟರು. ಪ್ರೀತಿ ಅವರ ಶ್ರಮವು ಫಲಿಸಿತ್ತು.
ಅವರು 2019 ರಲ್ಲಿ ಕೇವಲ 22 ನೇ ವಯಸ್ಸಿನಲ್ಲಿ UPSC ಪರೀಕ್ಷೆಯಲ್ಲಿ ತೇರ್ಗಡೆಯಾದರು.IPS ಆದ ನಂತರ ಅವರ ಮೊದಲ ಪೋಸ್ಟಿಂಗ್ ಸಹರಾನ್ ಪುರದಲ್ಲಿ ASP ಆಗಿ ಆಗಿತ್ತು. ಪ್ರಸ್ತುತ ಅವರು ನೋಯ್ಡಾದಲ್ಲಿ ಡಿಸಿಪಿಯಾಗಿ ನೇಮಕಗೊಂಡಿದ್ದಾರೆ.ಮಹಿಳೆಯರ ಸುರಕ್ಷತೆಗಾಗಿ ಅವರ ಕಾರ್ಯ ಶ್ಲಾಘನೀಯವಾಗಿದೆ.