ಅಮೇಠಿ, ಮೇ01(Daijiworld News/SS): ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸದಿರುವ ಕಾರಣವನ್ನು ಹೇಳಿದ್ದಾರೆ.
ನಾನು ಹಿಂದೆ ಸರಿದದ್ದಲ್ಲ. ಪಕ್ಷದ ಎಲ್ಲ ಹಿರಿಯ ಮುಖಂಡರ ಸಲಹೆ ಕೇಳಿದೆ. ಉತ್ತರ ಪ್ರದೇಶದಲ್ಲಿ ನನ್ನ ಜತೆಗೆ ಕೆಲಸ ಮಾಡುವ ಸಹೋದ್ಯೋಗಿಗಳ ಅಭಿಪ್ರಾಯ ಪಡೆದುಕೊಂಡೆ. ನನಗೆ 41 ಕ್ಷೇತ್ರನೋಡಿಕೊಳ್ಳುವ ಹೊಣೆ ಇದೆ ಎಂದು ಅವರು ದೃಢವಾಗಿ ಹೇಳಿದರು. ಹೀಗಾಗಿ ನಾನು ಮೋದಿ ವಿರುದ್ಧ ವಾರಣಾಸಿಯಿಂದ ಸ್ಪರ್ಧಿಸದಿರುವ ನಿರ್ಧಾರ ತೆಗೆದುಕೊಂಡೆ ಎಂದು ಸ್ಪಷ್ಟಪಡಿಸಿದ್ದಾರೆ.
41 ಕ್ಷೇತ್ರಗಳನ್ನು ನೋಡಿಕೊಳ್ಳುವ ಹೊಣೆ ಇದೆ. ಹಾಗಾಗಿ ಒಂದು ಕ್ಷೇತ್ರದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದು ಎಂದು ಪಕ್ಷದ ಹಿರಿಯರು ಕಾರಣ ಕೊಟ್ಟಿದ್ದಾರೆ. ನಾನು ಹಿಂದೆ ಸರಿದದ್ದಲ್ಲ. ಪಕ್ಷದ ಎಲ್ಲ ಹಿರಿಯ ಮುಖಂಡರ ಸಲಹೆ ಕೇಳಿದೆ. ಉತ್ತರ ಪ್ರದೇಶದಲ್ಲಿ ನನ್ನ ಜತೆಗೆ ಕೆಲಸ ಮಾಡುವ ಸಹೋದ್ಯೋಗಿಗಳ ಅಭಿಪ್ರಾಯ ಪಡೆದುಕೊಂಡೆ. ನನಗೆ 41 ಕ್ಷೇತ್ರ ನೋಡಿಕೊಳ್ಳುವ ಹೊಣೆ ಇದೆ ಎಂದು ಹಿರಿಯರು ತಿಳಿಸಿದ ಹಿನ್ನೆಲೆ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಮಾತ್ರವಲ್ಲ ಪಕ್ಷದಲ್ಲಿರುವ ಎಲ್ಲ ಅಭ್ಯರ್ಥಿಗಳೂ ಅವರವರ ಕ್ಷೇತ್ರಗಳಲ್ಲಿ ನಾನು ಪ್ರಚಾರಕ್ಕೆ ಹೋಗಬೇಕು ಅಂತಾ ಬಯಸುತ್ತಿದ್ದಾರೆ. ಈ ಎಲ್ಲಾ ಕಾರಣದಿಂದ ಮಹತ್ವದ ನಿರ್ಧಾರ ತೆಗೆದುಕೊಳ್ಳಬೇಕಾಯಿತು ಎಂದು ತಿಳಿಸಿದ್ದಾರೆ.