ಬೆಂಗಳೂರು,ಮಾ 29(DaijiworldNews/ AK): ಚುನಾವಣಾ ಕೆಲಸಕ್ಕಾಗಿ ರಾಜ್ಯ ಕಾಂಗ್ರೆಸ್ ಎಐಸಿಸಿಗೆ ಹಣ ಕಳುಹಿಸುತ್ತಿದ್ದಾರೆ ಎಂಬ ದೇವೇಗೌಡರ ಆರೋಪಕ್ಕೆ ಉತ್ತರಿಸಿದ ಡಿಕೆಶಿವಕುಮಾರ್ ಅವರು ಐಟಿ ಅಧಿಕಾರಿನಾ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ 1823 ಕೋಟಿ ರೂ. ಕಟ್ಟುವಂತೆ ಐಟಿ ಇಲಾಖೆ ನೋಟಿಸ್ ನೀಡಿದೆ. . ನಾವು ಎಐಸಿಸಿಗೆ ದುಡ್ಡು ಕಳುಹಿಸುವ ಅವಶ್ಯಕತೆ ಇಲ್ಲ ಎಂದು ಹೇಳಿದರು.
ನಮ್ಮ ಪಕ್ಷ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬ ಮಾಹಿತಿ ಇದೆ. ಈ ಹಿನ್ನಲೆ ಅಸೂಯೆಯಿಂದ ಹೆಚ್.ಡಿ.ದೇವೇಗೌಡರು ಮಾತನಾಡುತ್ತಿದ್ದಾರೆ. ಇವರೇ ಜೆಡಿಎಸ್ ಪಕ್ಷವನ್ನು ವಿಲೀನ ಮಾಡಿಬಿಟ್ಟರೆಂಬ ನೋವು ಇದೆ. ವಿರೋಧ ಪಕ್ಷದವರು ಪ್ರಬಲವಾಗಿರಬೇಕು ಎಂದು ನಮ್ಮ ಆಸೆ ಎಂದು ಹೇಳಿದರು.
ನಗರದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ್ದ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ ಅವರು, ರಾಜ್ಯ ಕಾಂಗ್ರೆಸ್ನಿಂದ ಎಐಸಿಸಿಗೆ ಹಣವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು.