ನವದೆಹಲಿ,ಮೇ1(DaijiworldNews/AZM):7 ಎ ಎ ಪಿ ಶಾಸಕರನ್ನು 10 ಕೋಟಿ ರೂ ದರದಲ್ಲಿ ಖರೀದಿಸಲು ಬಿಜೆಪಿ ಮುಂದಾಗಿದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಆರೋಪಿಸಿದ್ದಾರೆ.
ಬಿಜೆಪಿಗೆ ಯಾವುದೇ ಅಭಿವೃದ್ಧಿ ವಿಷಯಗಳು ಇಲ್ಲದೆ ಇರುವುದರಿಂದ ಈಗ ಕುದುರೆ ವ್ಯಾಪಾರದ ಮೂಲಕ ಏಳು ಮಂದಿ ಶಾಸಕರನ್ನು10 ಕೋಟಿ ರೂ.ದರದಲ್ಲಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಸಿಸೋಡಿಯಾ ತಿಳಿಸಿದರು. ಪಶ್ಚಿಮ ಬಂಗಾಳದ ಸೆರಾಂಪುರಿನ ರಾಲಿಯಲ್ಲಿ ಮೋದಿ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಮಾತನಾಡಿದ ಅವರು ಇಂತಹ ಹೇಳಿಕೆಗಳು ಪ್ರಧಾನಿ ಗಣತೆಗೆ ಸರಿ ಹೊಂದುವುದಿಲ್ಲ. ಭಾರತವು ಪ್ರಜಾಪ್ರಬಹುತ್ವ ದೇಶವಾಗಿದೆ. ಅವರು ಈ ಸ್ಥಾನದಲ್ಲಿರುವುದು ಕೂಡ ಪ್ರಜಾಪ್ರಭುತ್ವದಿಂದ ಎಂದು ಹೇಳಿದರು.
ಈ ಮೊದಲು ಪ್ರಧಾನಿ ಮೋದಿ ಪಶ್ಚಿಮ ಬಂಗಾಳದಲ್ಲಿ 40 ತೃಣಮೂಲ ಕಾಂಗ್ರೆಸ್ ಪಕ್ಷದ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಭಾಷಣವೊಂದರಲ್ಲಿ ಹೇಳಿದ್ದರು. ಇದರ ವಿರುದ್ಧ ತೃಣಮೂಲ ಕಾಂಗ್ರೆಸ್, ಮೋದಿ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು.