ಉತ್ತರಾಖಂಡ, ಏ 05(DaijiworldNews/AK): ಯುಪಿಎಸ್ ಸಿ ಪರೀಕ್ಷೆಯನ್ನು ದೇಶದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂದು ಗೊತ್ತಿರುವ ವಿಚಾರ. ಅದೇಷ್ಟೋ ಮಂದಿ ತಮ್ಮ ಪ್ರತಿಷ್ಠಿತ ಉದ್ಯೋಗ ತೊರೆದು ಅಧಿಕಾರಿಯಾಗಲು ಬಯಸುತ್ತಾರೆ. ಅಂತಹ ಪಟ್ಟಿಯಲ್ಲಿ ತಸ್ಕೀನ್ ಖಾನ್ ಕೂಡ ಒಬ್ಬರು. ಅವರು ಷ್ಯಾಷನ್, ಗ್ಲಾಮರ್ ಜಗತ್ತಿನ್ನು ತೊರೆದು IAS ಅಧಿಕಾರಿಯಾದ ಸ್ಪೂರ್ತಿಯ ಕಥೆ ಇಲ್ಲಿದೆ.
ಮಾಜಿ ಮಿಸ್ ಡೆಹ್ರಾಡೂನ್ ಮತ್ತು ಉತ್ತರಾಖಂಡದ ಸುಂದರಿ ತಸ್ಕೀನ್ ಖಾನ್ ಅಂತಹ ವ್ಯಕ್ತಿಗಳಲ್ಲಿ ಒಬ್ಬರು. ಮಾಜಿ ಫ್ಯಾಷನ್ ಮಾಡೆಲ್ 736 ರ್ಯಂಕ್ ಗಳಿಸುವ ಮೂಲಕ ಪ್ರತಿಷ್ಠಿತ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ತನ್ನ ಮಿಸ್ ಇಂಡಿಯಾ ಕನಸುಗಳನ್ನು ತ್ಯಜಿಸಿದರು.
2016-17 ರಲ್ಲಿ, ಅವರು ಮಿಸ್ ಡೆಹ್ರಾಡೂನ್ ಮತ್ತು ಮಿಸ್ ಉತ್ತರಾಖಂಡ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದ ತಾರೆಯಾಗಿ, ರೂಪದರ್ಶಿಯಾಗಿ, ಸೌಂದರ್ಯ ರಾಣಿಯಾಗಿ, ಭಾರತದ ಕಠಿಣ ಪರೀಕ್ಷೆಯ ಯುಪಿಎಸ್ ಸಿಯನ್ನು ಭೇದಿಸುವವರೆಗೆ ತಸ್ಕೀನ್ ನ ಸ್ಪೂರ್ತಿದಾಯಕ ಪ್ರಯಾಣವು ಅದ್ಭುತವಾದದು. ಸಿವಿಲ್ ಸರ್ವೀಸ್ ಅನ್ನು ಪಾಸ್ ಮಾಡುವ ಸಲುವಾಗಿ ತನ್ನ ಮಿಸ್ ಇಂಡಿಯಾ ಕನಸನ್ನು ತ್ಯಜಿಸಿದ ಈಕೆ ನಾಲ್ಕನೇ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡರು.
ಮಿಸ್ ಡೆಹ್ರಾಡೂನ್ ಮತ್ತು ಮಿಸ್ ಉತ್ತರಾಖಂಡ್ ಪ್ರಶಸ್ತಿಗಳನ್ನು ಗೆದ್ದ ನಂತರ, ತಕ್ಸೀನ್ ಖಾನ್ ಅವರ ಮುಂದಿನ ಕನಸು ಮಿಸ್ ಇಂಡಿಯಾ ಆಗುವುದು. ಆದರೆ ಆಕೆಯ ತಂದೆ ನಿವೃತ್ತರಾದ ನಂತರ, ಹೊಸ ದಿಕ್ಕಿನತ್ತ ಮುಖ ಮಾಡಿದರು. 3 ಬಾರಿ ವಿಫಲ ಪ್ರಯತ್ನಗಳ ನಂತರ, ಅವರು ಅಂತಿಮವಾಗಿ ತಾಳ್ಮೆ ಮತ್ತು ಕಠಿಣ ಪರಿಶ್ರಮದಿಂದ UPSC ಪರೀಕ್ಷೆಯಲ್ಲಿ ಉತ್ತೀರ್ಣ ಆದರು.ಅವರು UPSC ಗೆ ತಯಾರಿ ನಡೆಸಲು ಮುಂಬೈನ ಹಜ್ ಹೌಸ್ಗೆ ಪ್ರಯಾಣ ಬೆಳೆಸಿದರು.
ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಉಚಿತ ಕೋಚಿಂಗ್ ಸೆಂಟರ್ಗೆ ಪ್ರವೇಶ ಸಿಕ್ಕಿತು. ತಸ್ಕೀನ್ ಖಾನ್ ಅವರು 2020 ರಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಉಚಿತ UPSC ಕೋಚಿಂಗ್ ಗೆ ಪ್ರವೇಶ ಪಡೆದರು. ತನ್ನ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ, ಮನೆಯ ಆರ್ಥಿಕ ಸ್ಥಿತಿಯ ನಡುವೆ ಪ್ರತಿಷ್ಠಿತ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪರೀಕ್ಷೆಯಲ್ಲಿ 3 ಬಾರಿ ಫೇಲ್ ಆಗಿ ಕೊನೆಗೂ ತೇರ್ಗಡೆಯಾದರು. ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಲು ಪರಿತಪಿಸುವ ಅನೇಕ ಯುವಜನತೆಗೆ ಇವರ ಶ್ರಮ ಸ್ಪೂರ್ತಿ.