ಹೊಸದಿಲ್ಲಿ, ಮೇ 1(DaijiworldNews/AZM): ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಬಿಜೆಪಿ ಅಭ್ಯರ್ಥಿ ಪ್ರಗ್ಯಾ ಸಿಂಗ್ ಬಾಬರಿ ಮಸೀದಿ ಧ್ವಂಸದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನಲೆ ಆಕೆಯನ್ನು ಚುನಾವಣಾ ಪ್ರಚಾರದಿಂದ 72 ಗಂಟೆಗಳ ಕಾಲ ನಿಷೇಧ ಹೇರಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಗುರುವಾರ ಬೆಳಗ್ಗೆ 6 ಗಂಟೆಯಿಂದ ನಿಷೇಧದ ಅವಧಿ ಆರಂಭವಾಗಲಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪ್ರಜ್ಞಾ ಸಿಂಗ್, "ಬಾಬರಿ ಮಸೀದಿಯನ್ನು ನಾವು ದ್ವಂಸಗೈದಿದ್ದೆವು. ಈ ಬಗ್ಗೆ ನನಗೆ ಹೆಮ್ಮೆಯಿದೆ" ಎಂದು ಹೇಳಿದ್ದರು. ಈ ಹಿನ್ನಲೆ ಚುನಾವಣಾ ಆಯೋಗ ಪ್ರಗ್ಯಾ ಸಿಂಗ್ ಗೆ ಚುನಾವಣಾ ಪ್ರಚಾರದಿಂದ ನಿಷೇಧ ಹೇರಿದೆ.