ಲೇಹ್, ಏ 07 (DaijiworldNews/AA): ಹಿಮಪಾತದಲ್ಲಿ ಸಿಲುಕಿದ್ದ ಕನಿಷ್ಠ 80 ಮಂದಿಯನ್ನು ಭಾರತೀಯ ಸೇನೆ ಭಾನುವಾರ ರಕ್ಷಿಸಿದೆ. ಕೇಂದ್ರಾಡಳಿತ ಪ್ರದೇ ಲಡಾಖ್ ನ ಲೇಹ್ ಮತ್ತು ಶ್ಯೋಕ್ ನದಿ ಕಣಿವೆಯ ನಡುವಿನ 17,688 ಅಡಿ ಎತ್ತರದ ಚಾಂಗ್ ಲಾ ಪಾಸ್ ನಲ್ಲಿನ ಹಿಮಪಾತದಲ್ಲಿ ಇವರೆಲ್ಲೂ ಸಿಲುಕಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಭಾರತೀಯ ಸೇನೆಯ ಲೇಹ್ ಮೂಲದ 14 ಕಾರ್ಪ್ಸ್, ಚಾಂಗ್ ಲಾದ ಹಿಮಾವೃತ ಪ್ರದೇಶದಲ್ಲಿ ಭಾರೀ ಹಿಮಪಾತ ಸಂಭವಿಸಿತ್ತು. ವಿಷಯ ತಿಳಿದ ತ್ರಿಶೂಲ್ ವಿಭಾಗದ ಸೈನಿಕರು ಸ್ಥಳಕ್ಕೆ ಧಾವಿಸಿ, ತಡರಾತ್ರಿ 2 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿದೆ. ಈ ವೇಳೆ ಹಿಮದಲ್ಲಿ ಸಿಲುಕಿದ್ದ 80 ಮಂದಿಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬರೆದುಕೊಂಡಿದೆ. ಜೊತೆಗೆ ಕಾರ್ಯಾಚರಣೆ ನಡೆಸುತ್ತಿರುವ ಕೆಲ ಫೋಟೋಗಳು ಹಾಗೂ ವಿಡಿಯೋವನ್ನು ಹಂಚಿಕೊಂಡಿದೆ.