ಹರಿಯಾಣ, ಏ 08 (DaijiworldNews/AK): ಐಪಿಎಸ್ ಪೂಜಾ ಯಾದವ್ ಹರಿಯಾಣ ಮೂಲದವರು. ಕೆನಡಾದಲ್ಲಿ ಮತ್ತು ಜರ್ಮನಿಯಲ್ಲಿ ಕೈತುಂಬ ಸಂಬಳ ನೀಡುವ ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರು. ದೇಶದ ಸೇವೆಗೆ ಕೆಲಸ ಬಿಟ್ಟು ಬಂದು ಎರಡನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪಾಸ್ ಮಾಡಿದವರು. ಅವರ ಯಶೋಗಾಥೆ ಇಲ್ಲಿದೆ.
ಬೇರೆ ದೇಶದ ಅಭಿವೃದ್ಧಿಗೆ ನಾನೇಕೆ ಕೆಲಸ ಮಾಡಬೇಕು ಎನ್ನುವ ಅಲೋಚನೆ ಅವರ ಮನದಲ್ಲಿ ಬಂದ ಬಳಿಕ ವಿದೇಶಿದಲ್ಲಿದ್ದ ಎಂಎನ್ ಸಿ ಕಂಪನಿ ಉದ್ಯೋಗಕ್ಕೆ ಗುಡ್ಬೈ ಹೇಳಿ ಯುಪಿಎಸ್ ಸಿ ಪರೀಕ್ಷೆ ಬರೆದವರು ಪೂಜಾ ಯಾದವ್. ನಂತರ ಸಾಧನೆ ಗಾಗಿ ಶ್ರಮವಹಿಸಿ ಓದಿದ ಪೂಜಾ ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡಿ, ಯಶಸ್ಸು ಗಳಿಸಿದರು. ಐಪಿಎಸ್ ಅಧಿಕಾರಿಯೂ ಆದರು. ಇವರ ಸಕ್ಸಸ್ ಜರ್ನಿಯನ್ನುಒಂದು ತುಣುಕು ಇಲ್ಲಿದೆ.
ಪೂಜಾ ಯಾದವ್ ತಮ್ಮ ಶಾಲಾ ಶಿಕ್ಷಣವನ್ನು ಹರಿಯಾಣದಲ್ಲಿ ಪಡೆದರು. ತಮ್ಮ ಎಂ.ಟೆಕ್ ಪದವಿಯನ್ನು ಬಯೋಟೆಕ್ನಾಲಜಿ ಮತ್ತು ಫುಡ್ ಟೆಕ್ನಾಲಜಿ ವಿಷಯದಲ್ಲಿ ಓದಿ ಮುಗಿಸಿದರು. ನಂತರ ಕೆಲಸಕ್ಕಾಗಿ ಕೆನಡಾ ಮತ್ತು ಜರ್ಮನಿಗೆ ಹೋಗಿ ಅಲ್ಲೇ ಕೆಲವು ವರ್ಷಗಳ ಕಾಲ ಕೆಲಸ ಮಾಡಿದವರು. ಪೂಜಾ ಯಾದವ್ ಕೆಲವು ವರ್ಷಗಳ ಕಾಲ ಕೆನಡಾ ಮತ್ತು ಜರ್ಮನಿ ಯಲ್ಲಿ ಕೆಲಸ ಮಾಡಿದ ನಂತರ ಅಲ್ಲಿನ ಕೆಲಸಕ್ಕೆ ರಾಜೀನಾಮೆ ನೀಡಿದವರು ಪೂಜಾ. ಅಲ್ಲಿಂದ ಬಂದು ಯುಪಿಎಸ್ ಸಿ ಪರೀಕ್ಷೆ ಬರೆಯಲು ನಿರ್ಧಾರ ಮಾಡಿದರು.
ದೇಶಕ್ಕೆ ಸೇವೆ ಮಾಡುವ ಸಲುವಾಗಿ ವಿದೇಶಿ ಉದ್ಯೋಗ ಬಿಟ್ಟು ಬಂದ ಪೂಜಾ ರವರು ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಮೊದಲ ಪ್ರಯತ್ನದಲ್ಲಿ ಅರ್ಹತೆ ಪಡೆಯಲಿಲ್ಲ. ಆದರೆ ಗುರಿ ಬಿಡದ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆ ಪಾಸ್ ಮಾಡುವ ಮೂಲಕ, 2018 ರ ಬ್ಯಾಚ್ ನಲ್ಲಿ ಐಪಿಎಸ್ ಅಧಿಕಾರಿಯಾಗಿ ಯಶಸ್ಸು ಕಂಡರು
ವಿದೇಶದಲ್ಲಿ ಕೆಲಸಗಿಟ್ಟಿಸಿಕೊಂಡ ಅವರು ಶ್ರೀಮಂತರಾಗಿದ್ದರು ಅಂದುಕೊಳ್ಳುವವರೆ ಹೆಚ್ಚು, ಆದರೆ ಅವರ ಕುಟುಂಬ ಆರ್ಥಿಕವಾಗಿ ಹೆಚ್ಚು ಸಮಸ್ಯೆಗಳನ್ನು ಅನುಭವಿಸಿದೆ. ಇವರು ಬಡ ಕುಟುಂಬದಿಂದ ಬಂದ ಛಲಗಾತಿಯೇ ಆಗಿದ್ದಾರೆ. ಪೂಜಾ ಹಣದ ಸಮಸ್ಯೆ ನೀಗಿಸಿಕೊಳ್ಳುವ ಸಲುವಾಗಿಯೇ ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅಲ್ಲದೇ ತಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ವೇಳೆ ರಿಷಶ್ಪನಿಷ್ಟ್ ಕೆಲಸ ಮಾಡಿದ್ದರು.
ಪೂಜಾ ಯಾದವ್ ಐಎಎಸ್ ಅಧಿಕಾರಿ ವಿಕಲ್ಪ್ ಭಾರಧ್ವಜ್ ರನ್ನು 2021 ರ ಫೆಬ್ರವರಿ 18 ರಂದು ವಿವಾಹವಾಗಿದ್ದಾರೆ. ಅವರು ಲಾಲ್ ಬಹದ್ಧೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್, ಮಸ್ಸೂರಿ ಯಲ್ಲಿಯೇ ಪರಿಚಿತರಾಗಿದ್ದರು. ವಿಕಲ್ಪ್ 2016 ನೇ ಬ್ಯಾಚ್ ನ ಐಎಎಸ್ ಅಧಿಕಾರಿ ಆಗಿದ್ದಾರೆ. ಮೊದಲು ಕೇರಳ ಕೇಡರ್ ನ ಅಧಿಕಾರಿಯಾಗಿದ್ದರು. ನಂತರ ಗುಜರಾತ್ ಕೇಡರ್ ಗೆ ಅಧಿಕಾರಿಯಾಗಿ ಸೇವೆ ಸಲ್ಲಿದ್ದರು.