ಚೆನ್ನೈ , ಏ 09 (DaijiworldNews/AK): ಡಿಎಂಕೆ ಪಕ್ಷವು ತಮಿಳು ವಿರೋಧಿ ಸಂಸ್ಕೃತಿಯನ್ನು ಒತ್ತಾಯ ಪೂರ್ವಕವಾಗಿ ಹೇರುತ್ತಿದೆ. ಡಿಎಂಕೆ ಪಕ್ಷವು ಭ್ರಷ್ಟಾಚಾರದ ಹಕ್ಕುಸ್ವಾಮ್ಯ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ.
ತಮಿಳುನಾಡಿದ ವೆಲ್ಲೂರಿನಲ್ಲಿ ಚುನಾವಣಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಡಿಎಂಕೆ ಪಕ್ಷದ ಕುಟುಂಬ ರಾಜಕಾರಣದಿಂದಾಗಿ ಯುವಕರು ಮುಂದುವರಿಯಲು ಅವಕಾಶ ಸಿಗುತ್ತಿಲ್ಲ. ಹಳೆ ಚಿಂತನಾ ಬಲೆ, ಹಳೆಯ ರಾಜಕಾರಣದ ಬಲೆಯಲ್ಲೇ ತಮಿಳುನಾಡು ರಾಜ್ಯವನ್ನು ಸಿಲುಕಿಸಲು ಡಿಎಂ ಕೆ ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಎಂಕೆ ಪಕ್ಷದಿಂದ ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮತ್ತು ತಮಿಳು ವಿರೋಧಿ ಸಂಸ್ಕೃತಿ ಈ ಮೂರು ಮಾನದಂಡಗಳಾಗಿವೆ ಎಂದು ಮೋದಿ ಕಿಡಿಕಾರಿದ್ದಾರೆ.
ಕಚ್ಚತೀವು ದ್ವೀ ಪವನ್ನು ಶ್ರೀಲಂಕಾಗೆ ಬಿಟ್ಟುಕೊಟ್ಟಿವೆ ಎಂದು ಡಿಎಂ ಕೆ ಮತ್ತು ಕಾಂ ಗ್ರೆಸ್ ಪಕ್ಷವನ್ನು ಟೀ ಕಿಸಿದರು. ಮೀ ನುಗಾರರ ಬಗ್ಗೆ ಡಿಎಂಕೆಯ ಸಹಾನುಭೂತಿ ನಕಲಿ ಎಂದಿದ್ದಾರೆ. ಎನ್ಡಿಎ ಸರ್ಕಾರವು ಮೀನುಗಾರರಿಗೆ ಸಹಾಯಹಸ್ತ ಚಾಚಿದೆ ಎಂ ದು ಹೇ ಳಿದ್ದಾರೆ.ತಮಿಳುನಾಡಿನ ಶಾಲೆಗಳಲ್ಲಿ ಡ್ರಗ್ಸ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆಯೂ ಮೋ ದಿ, ಡಿಎಂ ಕೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಡಿಎಂ ಕೆಯ ರಾಜಕೀ ಯ ಅಜೆಂಡಾ ವಿಭಜನೆ, ವಿಭಜನೆ ವಿಭಜನೆ ಎಂದು ಮೋ ದಿ ಆಕ್ರೋ ಶ ವ್ಯಕ್ತಪಡಿಸಿದ್ದಾರೆ