ಅಹ್ಮದಾಬಾದ್, ಮೇ02(Daijiworld News/SS): ಗೋಧ್ರಾ ಥರವೇ ಪುಲ್ವಾಮಾ ದಾಳಿಯೂ ಬಿಜೆಪಿ ಮಾಡಿದ ಪಿತೂರಿ ಎಂಬ ವಿವಾದಾತ್ಮಕ ಹೇಳಿಕೆಯನ್ನು ಗುಜರಾತ್ ನ ಮಾಜಿ ಮುಖ್ಯಮಂತ್ರಿ ಶಂಕರ್ ಸಿನ್ಹ ವಘೇಲಾ ನೀಡಿದ್ದಾರೆ.
ಭಯೋತ್ಪಾದನೆಯನ್ನು ಬಿಜೆಪಿ ಚುನಾವಣೆಯ ಗೆಲುವಿಗಾಗಿ ಬಳಸಿಕೊಳ್ಳುತ್ತಿದೆ. ಬಿಜೆಪಿ ಆಡಳಿತಾವಧಿಯಲ್ಲೇ ಹೆಚ್ಚು ಭಯೋತ್ಪಾದಕ ಚಟುವಟಿಕೆಗಳು ನಡೆದಿವೆ. ಬಾಲಕೋಟ್ ಏರ್ ಸ್ಟ್ರೈಕ್ ನಲ್ಲಿ ಒಬ್ಬನೇ ಒಬ್ಬನೂ ಸತ್ತಿಲ್ಲ. ಇನ್ನೂರು ಉಗ್ರರು ಸತ್ತಿದ್ದಾರೆ ಎಂಬುದಕ್ಕೆ ಇದುವರೆಗೆ ಒಬ್ಬರಿಗೂ ಒಂದೇ ಒಂದು ಪುರಾವೆಯೂ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಬಾಲಕೋಟ್ ಏರ್ ಸ್ಟ್ರೈಕ್ ಸಹ ಬಿಜೆಪಿಯವರ ಬೇಕೆಂದೇ ಮಾಡಿದ ಪಿತೂರಿ. ಮಾತ್ರವಲ್ಲ, ಪುಲ್ವಾಮಾ ದಾಳಿಯಲ್ಲಿ ಬಳಸಿದ ಆರ್ ಡಿಎಕ್ಸ್ ಹೊತ್ತ ಕಾರಿನಲ್ಲಿದ್ದಿದ್ದು ಗುಜರಾತಿನ ರಿಜಸ್ಟ್ರೇಶನ್ ಸಂಖ್ಯೆ. ಗೋಧ್ರಾ ಸಹ ಇಂಥದೇ ಒಂದು ಪಿತೂರಿ ಎಂದು ವಘೇಲಾ ನೇರವಾಗಿ ಬಿಜೆಪಿಯ ವಿರುದ್ಧ ಕಿಡಿ ಕಾರಿದ್ದಾರೆ.