ವಾರಣಾಸಿ, ಮೇ03(Daijiworld News/SS): ವಾರಣಾಸಿಯಲ್ಲಿ ಪ್ರಧಾನಿ ಮೋದಿ ವಿರುದ್ಧ 25 ಮಂದಿ ರೈತರು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ಒಬ್ಬ ರೈತನ ನಾಮಪತ್ರ ಮಾತ್ರ ಸ್ವೀಕೃತವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೋದಿ ಸ್ಪರ್ಧಿಸಿರುವ ವಾರಣಾಸಿಯಲ್ಲೂ ತೆಲಂಗಾಣ ರಾಜ್ಯದ ನಿಜಾಮಬಾದ್ ಲೋಕಸಭಾ ಕ್ಷೇತ್ರದಂತೆ ರೈತರು ಚುನಾವಣೆ ಕಣಕ್ಕಿಳಿದಿದ್ದರು. ಮೋದಿ ವಿರುದ್ಧ 25 ಮಂದಿ ರೈತರು ನಾಮಪತ್ರ ಸಲ್ಲಿಸಿದ್ದರು, ಆದರೆ ಈ ಪೈಕಿ ಒಬ್ಬ ರೈತನ ನಾಮಪತ್ರ ಮಾತ್ರ ಸ್ವೀಕೃತವಾಗಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲ ದಿನಗಳಿಂದ ತೆಲಂಗಾಣ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಂದ 100ಕ್ಕೂ ಅಧಿಕ ರೈತರು, ವಾರಣಾಸಿಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಸುದ್ದಿ ಕೇಳಿಬಂದಿತ್ತು. ನಿಜಾಮಾಬಾದಿನ 55 ರೈತರು ಹಾಗೂ ತಮಿಳುನಾಡಿನ 40 ಮಂದಿ ರೈತರು ಕಣಕ್ಕಿಳಿಯುವ ಸಾಧ್ಯತೆಯಿತ್ತು. ಆದರೆ, ಕೊನೆಗೆ 25 ಮಂದಿ ರೈತರು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಒಬ್ಬ ರೈತನ ನಾಮಪತ್ರ ಮಾತ್ರ ಸ್ವೀಕೃತವಾಗಿದೆ.
ವಾರಣಾಸಿಯಲ್ಲಿ ಇಸ್ತೈ ಸುನ್ನಾಂ ನರಸಯ್ಯ ಅವರ ನಾಮಪತ್ರ ಮಾತ್ರ ಅಂಗೀಕೃತವಾಗಿದೆ. ಒಟ್ಟಾರೆ, 119 ನಾಮಪತ್ರಗಳ ಪೈಕಿ 89 ನಾಮಪತ್ರಗಳು ತಿರಸ್ಕೃತವಾಗಿವೆ.