ಚಿಕ್ಕಮಗಳೂರು, ಮೇ03(Daijiworld News/SS): ಮುಖ್ಯಮಂತ್ರಿ ಕುಮಾರಸ್ವಾಮಿ ಶತ್ರು ಸಂಹಾರ ಮತ್ತು ಯಶಸ್ಸಿಗಾಗಿ ಪೂಜೆ, ಹೋಮ ಹವನ ನಡೆಸಲು ಸಂಕಲ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಪ್ರಕೃತಿ ಚಿಕಿತ್ಸೆಯನ್ನು ಮುಗಿಸಿ ಬಳಿಕ ಸಿಎಂ ಅವರು ಉಡುಪಿಯಿಂದ ನೇರವಾಗಿ ಚಿಕ್ಕಮಗಳೂರಿಗೆ ಆಗಮಿಸಲಿದ್ದಾರೆ. ಚಿಕ್ಕಮಗಳೂರಿನ ಕೊಪ್ಪದಲ್ಲಿ ಹೋಮ ಹವನ, ಪೂಜೆಯನ್ನಿಟ್ಟುಕೊಳ್ಳಲಾಗಿದೆ.
ಗಣೇಶ್ ಸೋಮಾಯಾಜಿ ಅವರ ಸೂಚನೆ ಮೇರೆಗೆ ಈ ಪೂಜೆ ನಡೆಯುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ರುದ್ರಹೋಮ ಹಾಗೂ ಗಣಪತಿ ಹೋಮ ನಡೆಯಲಿದ್ದು, ಎ.4ರಂದು ಬೆಳಗ್ಗೆ ಹೋಮದ ಪೂರ್ಣಾಹುತಿಯಲ್ಲಿ ಭಾಗಿಯಾಗಲಿದ್ದಾರೆ.
ಅಮಾವಾಸ್ಯೆಯಂದು ಮುಖ್ಯಮಂತ್ರಿ ಕುಮಾರಸ್ವಾಮಿ ಈ ವಿಶೇಷ ಪೂಜೆ ನಡೆಸಲಿದ್ದಾರೆ. ಕೊಪ್ಪ ತಾಲೂಕಿನ ಕಮ್ಮರಡಿ ಬಳಿಯ ಕುಡ್ನಳ್ಳಿಯಲ್ಲಿರೋ ಉಮಾಮಹೇಶ್ವರಿ ದೇವಾಲಯದಲ್ಲಿ ಈ ಪೂಜೆಯನ್ನು ಕೈಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.