ನವದೆಹಲಿ, ಮೇ03(Daijiworld News/SS): ಹಳ್ಳಿಯ ಪುಟ್ಟ ಹುಡುಗನೊಬ್ಬ ಕುತ್ತಿಗೆಗೊಂದು ಕೆಂಪು ಬಣ್ಣದ ಟವೆಲ್ ಸುತ್ತಿ 'ಮೋದಿ ಫಿರ್ ಆಯೇಗಾ' ಎಂದು ಹಾಡಿರುವ ರ್ಯಾಪ್ ಸಾಂಗ್ ವಿಡಿಯೋ ಟ್ವಿಟ್ಟರ್ನಲ್ಲಿ ಬಾರಿ ವೈರಲ್ ಆಗಿದೆ.
ಚೌಕಿದಾರ್ ಸ್ಕ್ವಿಂಟಿ ಎಂಬವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಮಾಡಿಕೊಂಡಿದ್ದಾರೆ. ರಣವೀರ್ ಸಿಂಗ್ ಅಭಿನಯದ 'ಗಲ್ಲಿ ಬಾಯ್' ಸಿನಿಮಾದ 'ಅಪನಾ ಟೈಂ ಆಯೇಗಾ' ಹಾಡಿಗೆ ಮೋದಿ ಕುರಿತಾದ ಸಾಹಿತ್ಯ ಬರೆದು ಹಾಡಿರುವ 'ಮೋದಿ ಫಿರ್ ಆಯೇಗಾ' ರ್ಯಾಪ್ ಸಾಂಗ್ ಈಗ ಎಲ್ಲೆಡೆ ಹರಿದಾಡುತ್ತಿದೆ.
ಹಳ್ಳಿಯಲ್ಲಿ ತೆಗೆದ ವಿಡಿಯೋ ಇದಾಗಿದ್ದು, ಮೋದಿ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆ ಈ ಪುಟ್ಟ ಹುಡುಗ ಅದ್ಭುತವಾಗಿ ಹಾಡಿದ್ದಾನೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸದ್ದು ಮಾಡುತ್ತಿದೆ. ಜೊತೆಗೆ ನರೇಂದ್ರ ಮೋದಿ ಅಭಿಮಾನಿಗಳು ಕೂಡ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ.
ಮಾತ್ರವಲ್ಲ, ನಿಕುಂಜ್ ಪಟೇಲ್ ಎಂಬುವವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಈ ಹುಡುಗನನ್ನು ಪ್ರಮಾಣವಚನ ಸಮಾರಂಭಕ್ಕೆ ಆಹ್ವಾನಿಸಬೇಕು ಎಂದು ಬರೆದು ಅಮಿತ್ ಶಾ ಮತ್ತು ನರೇಂದ್ರ ಮೋದಿ ಜೊತೆ ಟ್ಯಾಗ್ ಮಾಡಿದ್ದಾರೆ.