ಹಾಸನ, ಮೇ04(Daijiworld News/SS): ಇಲ್ಲಿನ ಬೇಲೂರಿನ ಯಗಚಿ ನದಿಯ ದಡದ ಮನೆಯೊಂದರಲ್ಲಿ ದನದ ರಾಶಿ ರಾಶಿ ಕೊಂಬುಗಳು ಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಯಗಚಿ ನದಿಯ ದಡದ ಬಳಿಯಿರುವ ಮನೆಯಲ್ಲಿ ಕೊಂಬಿನ ರಾಶಿ ಪತ್ತೆಯಾಗಿದೆ. ಅಬ್ರರ್ ಷರೀಫ್ ಕಳೆದ 2 ವರ್ಷಗಳಿಂದ ಈ ದಂಧೆ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.
ಬೇಲೂರಿನ ಯಗಚಿ ನದಿಯ ದಡದ ಮನೆಯಲ್ಲಿ ಆಕ್ರಮವಾಗಿ 2 ಲಾರಿ ಲೋಡು ಕೊಂಬುಗಳು ಪತ್ತೆಯಾಗಿದ್ದು, ಪರಿಶೀಲನೆ ನಡೆಸಲು ಸ್ಥಳಕ್ಕೆ ಆಗಮಿಸಿದ ಅಧಿಕಾರಗಳ ವಿರುದ್ಧ ಅಬ್ರರ್ ವಾಗ್ವಾದಕ್ಕೆ ಇಳಿದು ಅವರನ್ನು ತಡೆದಿದ್ದಾನೆ ಎನ್ನಲಾಗಿದೆ.
ಅಬ್ರರ್ ಹಸುವಿನ ಹಸಿ ಮಾಂಸದ ತ್ಯಾಜ್ಯ ಮತ್ತು ಕೊಂಬುಗಳನ್ನು ಯಗಚಿ ನದಿಯಲ್ಲಿ ತೇಲಿ ಬಿಡುತ್ತಾನೆ. ತಾಲೂಕಿನ ಆಲೂರು ಜನರು ನದಿಯ ನೀರನ್ನು ಕುಡಿಯಲು ಹಾಗೂ ದಿನನಿತ್ಯದ ಕೆಲಸ ಕಾರ್ಯಗಳಿಗೆ ಬಳಸುತ್ತಾರೆ. ಆದರೆ ಈ ವ್ಯಕ್ತಿ ತ್ಯಾಜ್ಯವನ್ನು ನೀರಿಗೆ ಹಾಕಿ ಜಲ ಮಾಲಿನ್ಯ ಮಾಡುತ್ತಿದ್ದಾನೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.