ಮೀರತ್, ಮೇ 04 (Daijiworld News/MSP): ತನ್ನ ಐಷಾರಾಮಿ ಮನೆಯಲ್ಲಿ ಮೂವರು ಅಪ್ರಾಪ್ತ ಬಾಲಕಿಯರನ್ನು ಕೂಡಿ ಹಾಕಿ ಲೈಂಗಿಕ ಕಿರುಕುಳ ನೀಡುತ್ತಿದ್ದ 63 ವರ್ಷದ ನಿವೃತ್ತ ವಿಮೆ ಕಾರ್ಯನಿರ್ವಾಹಕನನ್ನು ಮೀರತ್ ಪೊಲೀಸರು ಬಂಧಿಸಿದ್ದಾರೆ.
ಮೀರತ್ನ ಜಾಗೃತಿ ವಿಹಾರ ಪ್ರದೇಶದ ಬೃಹತ್ ಬಂಗಲೆಯಲ್ಲಿ ಒಂಟಿಯಾಗಿದ್ದ ವಾಸಿಸುತ್ತಿದ್ದ ಆರೋಪಿ ವಿಮಲ್ ಚಂದ್ 2015 ನಿವೃತ್ತಿ ಹೊಂದಿದ್ದ. ಆದೇ ವರ್ಷ ಆತನ ಪತ್ನಿ ಮೃತಪಟ್ಟಿದ್ದಳು. ಬಳಿಕ ಮನೆಯಲ್ಲಿ ಒಬ್ಬನೇ ವಾಸವಾಗಿದ್ದನು. ಹೀಗಾಗಿ ಸೆಕ್ಯೂರಿಟಿಗಾಗಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಮನೆಗೆ ಸಿಸಿಟಿವಿ ಹಾಕಿಸಿದ್ದ.
ವಿಮಲ್ ಚಂದ್ ಮನೆಯಲ್ಲಿದ್ದ ಕ್ಯಾಮೆರಾಗಳನ್ನು ರಿಪೇರಿ ಮಾಡುತ್ತಿದ್ದ ಸಂದರ್ಭ ಸಿಸಿಟಿವಿ ಟೆಕ್ನಿಷಿಯನ್ಗೆ ವಿಮಲ್ ಚಂದ್ ಬಾಲಕಿಯ ಮೇಲೆ ಎಸಗುತ್ತಿದ್ದ ನೀತ ಕೃತ್ಯ ಬೆಳಕಿಗೆ ಬಂದಿದೆ. ಇತ ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾನೆ. ವಿಮಲ್ ಚಂದ್ ಕುಕೃತ್ಯ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಪರಿಸರವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಗುರುವಾರ ರಾತ್ರಿ, ಮೀರತ್ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಿ ಮೂವರು ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಾಲಕಿಯರಲ್ಲಿ ಓರ್ವಳ ವಯಸ್ಸು 10 ವರ್ಷ.
ವಿಮಲ್ ಚಂದ್ಗೆ ಮಗಳೊಬ್ಬಳು ಇದ್ದು ಈಕೆ ವಿದೇಶದಲ್ಲಿ ನೆಲೆಸಿದ್ದಾರೆ. ಆರೋಪಿ ವಿಮಲ್ ಚಂದ್ನನ್ನು ಅರೆಸ್ಟ್ ಮಾಡಲಾಗಿದೆ ಎಂದು ಎಸ್ಪಿ ಅಖಿಲೇಶ್ ನಾರಾಯಣ್ ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿಯರು ಮಾನವ ಕಳ್ಳ ಸಾಗಣೆಗೆ ದಂಧೆಯಲ್ಲಿ ಸಿಲುಕಿ ನಲುಗಿದವರೆಂದು ಕಾಣಿಸುತ್ತಿದೆ.