ರಾಮನಗರ, ಮೇ04(Daijiworld News/SS): ಏಳು ತಲೆ ಸರ್ಪದ ಪೊರೆ ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದೀಗ ಧಾರ್ಮಿಕ ರೂಪ ಪಡೆದಿದೆ. ಮಾತ್ರವಲ್ಲ, ಜನ ಇದನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿ ಮರಿಗೌಡನ ದೊಡ್ಡಿ ಬಳಿ ನಿರ್ಜನ ಪ್ರದೇಶದಲ್ಲಿ ಏಳು ತಲೆಯ ಹಾವಿನ ಪೊರೆ ಕಾಣಿಸಿಕೊಂಡಿದ್ದು, ಅದನ್ನು ಕಂಡ ಜನರು ದೈವಸ್ವರೂಪ ಇದಾಗಿದೆ ಎಂದು ಹೇಳುತ್ತಿದ್ದಾರೆ.
ಮಾತ್ರವಲ್ಲ, ಪೊರೆ ಕಂಡ ತಕ್ಷಣ ಹೂ ಹಣ್ಣು ಇಟ್ಟು ಅರಿಶಿಣ ಕುಂಕುಮ ಹಾಕಿ ಪೂಜೆ ಆರಂಭಿಸಿದ್ದಾರೆ. ಏಳೆ ಎಳೆಗಳುಳ್ಳ 7 ತಲೆಯ ನಾಗರ ಹಾವಿನ ಪೊರೆ ಕಾಣಿಸಿಕೊಂಡಿದ್ದು ಸ್ಥಳೀಯರ ಭಕ್ತಿಯನ್ನು ಹೆಚ್ಚಿಸಿದೆ.
ಆದಿ ಶೇಷನೇ ಅವತಾರವೆತ್ತಿದ್ದಾನೆ ಎಂದು ಭಾವಿಸಿ ಅಕ್ಕಪಕ್ಕದ ಗ್ರಾಮಗಳಿಂದಲೂ ಜನರು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ.
ಪ್ರಕೃತಿಗೂ, ವಿಸ್ಮಯಕ್ಕೂ ಅವಿನಾಭಾವ ಸಂಬಂಧವಿದೆ. ಪೃಕೃತಿಯ ಒಡಲಲ್ಲಿ ಅಡಗಿರುವ ಅದೆಷ್ಟೋ ಅಚ್ಚರಿಗಳು ಬಹಿರಂಗವಾದಾಗ ಸಾರ್ವಜನಿಕ ವಲಯದಲ್ಲಿ ಧಾರ್ಮಿಕ ಭಾವಗಳನ್ನು, ವಿಸ್ಮಯಗಳನ್ನು ಹೊಸೆಯುವುದು ಸಾಮಾನ್ಯ.