ವಿಜಯಪುರ, ಏ.17(DaijiworldNews/AK):2023-24ರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ , ವಿಜಯಪುರ ಮೂಲದ ಹುಬ್ಬಳ್ಳಿ ನಿವಾಸಿ ವಿಜೇತಾ ಭೀಮಸೇನ ಹೊಸಮನಿ ಎಂಬವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಪಾಸಾಗಿ 100ನೇ ಸ್ಥಾನ ಪಡೆಯುವುದರಲ್ಲಿ ಯಶಸ್ಸಿಯಾಗಿದ್ದಾರೆ. ಅವರ ಯಶೋಗಾಥೆ ಇಲ್ಲಿದೆ.
ವಿಜೇತಾ ಅವರು ವಿಜಯಪುರದ ಮೂಲದ ಹುಬ್ಬಳ್ಳಿ ನಿವಾಸಿ. ಅವರು ಎಲ್ಕೆಜಿ-5ನೇ ತರಗತಿ ವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ಓದಿದ್ದಾರೆ. ಬಳಿಕಎಸ್ಎಸ್ಎಲ್ಸಿ ವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಅಧ್ಯಯನ ಮಾಡಿದ್ದರು.ಪಿಯುಸಿ ಓದಿಗೆ ಮರಳಿ ವಿಜಯಪುರಕ್ಕೆ ಬಂದ ವಿಜೇತಾ, ಪ್ರಥಮ ವರ್ಷವನ್ನು ನಗರದ ತುಂಗಳ ಪದವಿ ಪೂರ್ವ ಕಾಲೇಜಿನಲ್ಲಿ, ದ್ವಿತೀಯ ವರ್ಷದ ಅಧ್ಯಯನವನ್ನು ದರ್ಬಾರ ಕಾಲೇಜಿನಲ್ಲಿ ಮುಗಿಸಿದ್ದರು.ಪ್ಲ್ಯಾ ಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಗುಜರಾತ್ ರಾಜ್ಯದ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಕಾನೂನು ಪದವಿಗಾಗಿಎಲ್ಎಲ್ಬಿ ಮುಗಿಸಿದ್ದು, ಕ್ರಿಮಿನಲ್ ಲಾ ವಿಷಯದಲ್ಲಿ ಚಿನ್ನದ ಪದಕದೊಂದಿಗೆ ಕಾನೂನು ಪದವಿ ಪಡೆದಿದ್ದಾರೆ.
2020 ರಿಂದ ಮೂರು ಬಾರಿ ಯುಪಿಎಸ್ಸಿ ಪರೀಕ್ಷೆ ಎದುರಿಸಲು ಆರಂಭಿಸಿದ್ದ ವಿಜೇತಾ, 2023 ರ ಪಿಲ್ಮನರಿ ಪರೀಕ್ಷೆ, ಮೇನ್ ಎಕ್ಸಾಂ ಪಾಸ್ ಆಗಿ ಇಂಟರವ್ಯೂವ್ ಪಾಸ್ ಮಾಡಿ ಉತ್ತೀ ರ್ಣರಾಗಿದ್ದಾರೆ.
ಮನೆಯಲ್ಲೇ ಇದ್ದು ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದ ವಿಜೇತಾ ಹೊಸಮನಿ, ಆನ್ಲೈನ್ ತರಬೇತಿ ಪಡೆದಿದ್ದರು. ಇದೀಗ 100ನೇ ರ್ಯಾಕಿಂಗ್ ಸಿಕ್ಕಿದ್ದು, ಭಾರತೀಯ ಕಂದಾಯ ಸೇವೆಯಲ್ಲಿ ಸೇವಾ ಅವಕಾಶ ಸಿಗುವ ನಿರೀಕ್ಷೆಯಲ್ಲಿದ್ದಾರೆ.ಬ್ಯಾಂಕ್ ಉದ್ಯೋ ಗದಲ್ಲಿದ್ದ ವಿಜೇತಾ ತಂದೆ ಭೀಮಶೇನ ಹೊಸಮನಿ ಸ್ವಯಂ ನಿವೃತ್ತಿ ಪಡೆದಿದ್ದು, ಮಗಳ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.