ಧಾರವಾಡ, ಏ.18(DaijiworldNews/AK):ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆ (ಯುಪಿಎಸ್ಸಿ) ಫಲಿತಾಂಶ ಇದೇ ಏ.16 ರಂದು ಮಂಗಳವಾರ ಪ್ರಕಟವಾಗಿದ್ದು, ನಗರದ ಕೃಷಿ ವಿಶ್ವವಿದ್ಯಾಲಯದ ಪದವೀಧರೆ ಸೌಭಾಗ್ಯ ಬೀಳಗಿಮಠ ಅವರು 101ನೇ ರ್ಯಾಂಕ್ ಪಡೆದಿದ್ದಾರೆ. ಅವರ ಸಾಧನೆಯ ಸಕ್ಸಸ್ ಸ್ಟೋರಿ ಇಲ್ಲಿದೆ.
ಸೌಭಾಗ್ಯ ದಾವಣಗೆರೆ ಮೂಲದವರು. ಶರಣಯ್ಯ ಸ್ವಾಮಿ ಮತ್ತು ಶರಣಮ್ಮ ದಂಪತಿಯ ಪುತ್ರಿ. ಶರಣಯ್ಯ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಮುಧೋಳ ಗ್ರಾಮದವರು, ಸದ್ಯ ದಾವಣಗೆರೆಯಲ್ಲಿ ನೆಲೆಸಿದ್ದಾರೆ. ದಾವಣಗೆರೆಯಲ್ಲೇ ಶಾಲಾ ಮತ್ತು ಪಿಯು ಶಿಕ್ಷಣ ಪೂರ್ಣ ಗೊಳಿಸಿದ್ದಾರೆ. 2022ರಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಬಿ.ಎಸ್ಸಿ ಪದವಿ ಪಡೆದಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಎರಡನೇ ಪ್ರಯತ್ನದಲ್ಲಿ ಯಶಸ್ಸು ಪಡೆದಿದ್ದಾರೆ.ಐಎಎಸ್ ಅಧಿಕಾರಿ ಆಗಬೇಕು ಎಂಬ ಕನಸು ಬಾಲ್ಯದಲ್ಲೇ ಇತ್ತು .ಯುಪಿಎಸ್ಸಿ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವ ಗುರಿ ಇಟ್ಟುಕೊಂಡು ಎರಡು ವರ್ಷಗಳಿಂದ ಪಟ್ಟು ಬಿಡದೆ ತಯಾರಿ ನಡೆಸಿದ ಸೌಭಾಗ್ಯ ಎರಡನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.
ಸೌಭಾಗ್ಯ ಯಾವುದೇ ಕೋ ಚಿಂಗ್ ಹೋಗಿಲ್ಲ. ಧಾರವಾಡದಲ್ಲಿ 2018ರಲ್ಲಿ ಬಿ.ಎಸ್ಸಿ (ಕೃಷಿ) ಪದವಿಗೆ ಸೇರಿದರು. 2019ರ ಲಾಕ್ಡೌನ್ ಸಮಯದಲ್ಲಿ ತಯಾರಿ ಆರಂಭಿಸಿದ ಸೌಭಾಗ್ಯ ಪದವಿ ಅಂತಿಮ ವರ್ಷ ದಲ್ಲಿ ಇರುವ ಹೊತ್ತಿಗೆ ಪರೀಕ್ಷೆ ಬರೆದರು ಆದರೆ, ಆಗ ಯಶಸ್ವಿ ಸಿಕ್ಕಿಲ್ಲ. ಬಳಿಕ ಆನ್ಲೈ ನಲ್ಲಿ ಕೆಲವು ಟೆಸ್ಟ್ ಸರಣಿಗೆ ಹಾಜರಾದ ಅವರು ಪ್ರತಿ ದಿನ 8 ಗಂಟೆ ಓದಿ .ಇದರ ಜೊತೆಗೆ ದಿನಪತ್ರಿಕೆ, ನಿಯತಕಾಲಿಕೆಗಳನ್ನು ಓದುತಿತ್ತದ್ದರು ಅಭ್ಯಾಸ ಮಾಡಿಕೊಂಡಿದ್ದರು ಸೌಭಾಗ್ಯ. ಅಲ್ಲದೇ ಕರ್ನಾಟಕ ವಿಶ್ವವಿದ್ಯಾಲಯದ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಅಧ್ಯಯನ ಮಾಡುತ್ತಿದ್ದರು. ಪುಸ್ತಕಗಳನ್ನು ಓದಿ ಟಿಪ್ಪಣಿ ಮಾಡುವುದು ರೂಢಿಸಿಕೊಳ್ಳುತ್ತಿದ್ದರು. ಬಾಲ್ಯದಿಂದಲೂ ಚರ್ಚಾಸ್ಪರ್ಧೆ , ಪ್ರಬಂಧ ಸ್ಪರ್ಧೆ ಗಳಲ್ಲಿ ಭಾಗವಹಿಸುತ್ತಿದ್ದ ಅವರಿಗೆ ಸದರ್ಶ ನ ಎದುರಿಸಲು ಸಹಕಾರಿ ನೀಡಿದೆ.
ಯಾವುದೇ ಸಿದ್ಧ ಮಾದರಿಯನ್ನು ಅನುಸರಿಸದೆ ಸ್ವಂತವಾಗಿ ನನ್ನದೇ ಆದ ರೀತಿ ಉತ್ತರಿಸುವ ಕಲೆ ರೂಢಿಸಿಕೊಂಡಿಸಿಕೊಳ್ಳುವ ಮೂಲ ಈ ಬಾರಿ ಸೌಭಾಗ್ಯ ಅವರ ಸೌಭಾಗ್ಯದ ಬಾಗಿಲು ತೆರೆದಿದೆ.