ನವದೆಹಲಿ,ಮೇ05(DaijiworldNews/AZM):ಮಾಜಿ ಪ್ರಧಾನಿ ದಿವಗಂತ ರಾಜೀವ್ ಗಾಂಧಿಯವರ ಕುರಿತು ಅವಹೇಳನಕಾರಿ ಹೇಳಿಕೆಯನ್ನು ನೀಡಿರುವ ಪ್ರಧಾನಿ ಮೋದಿಯವರಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ತಿರುಗೇಟು ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ಗಾಂಧಿ, ಪ್ರಧಾನಿ ಮೋದಿಯವರೆ ಯುದ್ಧ ಮುಗಿದಿದೆ. ನಿಮ್ಮ ಕರ್ಮವು ನಿಮಗಾಗಿ ಕಾಯುತ್ತಿದೆ. ನಿಮ್ಮ ಬಗೆಗಿನ ಆಂತರಿಕ ನಂಬಿಕೆಗಳನ್ನು ನನ್ನ ತಂದೆಯ ಮೇಲೆ ಆರೋಪಿಸಿ ನೀವು ರಕ್ಷಣೆ ಪಡೆಯುವುದು ಸಾಧ್ಯವಿಲ್ಲ. ನಮ್ಮೆಲ್ಲ ಪ್ರೀತಿ ಹಾರೈಕೆ ನಿಮ್ಮ ಮೇಲಿದೆ” ಎಂದು ಪ್ರತಿಕ್ರಯಿಸಿದ್ದಾರೆ.
ಪ್ರಧಾನಿ ಮೋದಿ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲೂ ಕಟು ಟೀಕೆಗಳು ವ್ಯಕ್ತವಾಗುತ್ತಿದ್ದು,ಪ್ರಧಾನಿಯಂತಹ ಉನ್ನತ ಹುದ್ದೆಯಲ್ಲಿರುವವರು ತಮ್ಮ ಸ್ಥಾನದ ಗೌರವ ಕಳೆಯುವಂತಹ ಹೇಳಿಕೆಯನ್ನು ನೀಡಬಾರದು. ಕಾಂಗ್ರೆಸ್ ವಿರೋಧಿ ಹೇಳಿಕೆಯ ಹೊರತಾಗಿ ಕಳೆದ 5 ವರ್ಷದಲ್ಲಿ ನಿಮ್ಮ ಸಾಧನೆ ಏನು? ಎಂಬುದನ್ನು ಜನರಿಗೆ ತಿಳಿಸಿ ಎಂದು ಪ್ರಧಾನಿ ಮೋದಿಗೆ ತಾಕೀತು ಮಾಡಿದ್ದಾರೆ.
ಪ್ರಧಾನಿ ಮೋದಿಯವರು ಶನಿವಾರ ಉತ್ತರಪ್ರದೇಶದ ಲಕ್ನೋನಲ್ಲಿ ನಡೆದ ಚುನಾವಣಾ ಪ್ರಚಾರದ ವೇಳೆ “ರಾಹುಲ್ ಗಾಂಧಿ ಅವರೇ ನಿಮ್ಮ ತಂದೆ ರಾಜೀವ್ ಗಾಂಧಿಯವರ ಬದುಕು ಭ್ರಷ್ಟಾಚಾರಿ ನಂ.1 ಎಂಬ ಹಣೆಪಟ್ಟಿಯೊಂದಿಗೆ ಅಂತ್ಯವಾಗಿತ್ತು” ಎಂದು ಅವಹೇಳನಕಾರಿಯಾದ ಹೇಳಿಕೆ ನೀಡಿದ್ದರು.