ನವದೆಹಲಿ, ಏ. 21(DaijiworldNews/AA): ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ಅನ್ನು ಮರಳಿ ತರಲಿದೆ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಚುನಾವಣಾ ಬಾಂಡ್ ಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಬಳಿಕ ಚುನಾವಣಾ ಬಾಂಡ್ ಗಳು ಮತ್ತೆ ಚಾಲ್ತಿಗೆ ಬರಬಹುದು. 2024 ರ ಲೋಕಸಭೆ ಚುನಾವಣೆಯಲ್ಲಿ, ಚುನಾವಣಾ ಬಾಂಡ್ಗಳ ವಿಷಯದಲ್ಲಿ ಪ್ರತಿಪಕ್ಷಗಳು ಬಿಜೆಪಿಯ ಮೇಲೆ ದಾಳಿ ಮಾಡುತ್ತಿವೆ. ಇದು ದೇಶದ ಅತಿದೊಡ್ಡ ಹಗರಣ ಎಂದು ಪ್ರತಿಪಕ್ಷಗಳು ಹೇಳುತ್ತಿವೆ ಎಂದರು.
ಚುನಾವಣಾ ಬಾಂಡ್ ಗಳನ್ನು ರದ್ದುಗೊಳಿಸಿ ಸುಪ್ರೀಂಕೋರ್ಟ್ ಫೆಬ್ರವರಿಯಲ್ಲಿ ತೀರ್ಪು ನೀಡಿತ್ತು. ಸುಪ್ರೀಂಕೋರ್ಟ್ ನ ಆದೇಶದಂತೆ ಚುನಾವಣಾ ಬಾಂಡ್ ಪಡೆದವರ ಮಾಹಿತಿಯನ್ನು ಎಸ್ ಬಿಐ ಬಹಿರಂಗ ಪಡಿಸಿತ್ತು.