ಕಲಬುರಗಿ, ಏ. 21(DaijiworldNews/AK):ಮತ ಯಂತ್ರದಲ್ಲಿ ಬಿಜೆಪಿ ಬಟನ್ ಒತ್ತಿದರೆ ಅದೇ ನಿಮಗೆ ಎಕೆ 47 ಇದ್ದ ಹಾಗೆ, ಹಿಂದೂಗಳು ಸುರಕ್ಷಿತರಾಗಿ ಉಳಿಯಬೇಕಾದರೆ ಅದನ್ನೇ ಒತ್ತಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜಾಪುರದಲ್ಲಿ ಒಂದಾದರು ಹಿಂದೂ ಹೆಣ್ಣು ಮಕ್ಕಳಿಗೆ ಕೆಣಕಿರುವ ಘಟನೆ ಆಗಿದೆಯಾ? ಮೊದಲು ತರಕಾರಿ ತರಲು ಹೋದ್ರೆ ಎ ಮಾಲ್ ಬಹುತ್ ಅಚ್ಚಾ ಹೈ ಎಂದು ಪರೋಕ್ಷವಾಗಿ ಹೇಳುತ್ತಿದ್ದರು.
ಈಗ ನಮ್ಮ ಜನರು ಕೂಡ ತುಂಬಾ ಜಾಣರಾಗಿದ್ದಾರೆ. ಕುಂಕುಮ ಹಚ್ಚಿಕೊಂಡಿರುವವರನ್ನ ನೋಡಿ ಖರೀದಿ ಮಾಡ್ತಿದ್ದಾರೆ ಎಂದು ಅವರು ಹೇಳಿದ್ದಾರೆ.