ಮಧ್ಯಪ್ರದೇಶ, ಏ. 24(DaijiworldNews/AK): ಕೃಷಿಕರ ಕುಟುಂಬಗಳಿಂದ ಬಂದ ಹೆಣ್ಣುಮಕ್ಕಳು ದೊಡ್ಡ ಹುದ್ದೆಗಳನ್ನೇರುವುದು ಅಸಾಮಾನ್ಯದ ವಿಚಾರವೇ ಸರಿ. ಅಂತಹ ಒಂದು ಸಾಧನೆ ಮಾಡಿ ಯಶಸ್ಸಿಯಾದ ಸ್ಟೋರಿ ಇಲ್ಲಿದೆ.
ಈಕೆಯ ಹೆಸರು ತಪಸ್ಯ ಪರಿಹಾರ್. ರೈತನ ಮಗಳು ಇಂದು ಐಎಎಸ್ ಆಫೀಸರ್ ಆಗಿದ್ದಾರೆ.ಮಧ್ಯಪ್ರದೇಶದ ನಿವಾಸಿ ತಪಸ್ಯ ಪರಿಹಾರ್ ಅವರು ಅತ್ಯಂತ ಜನಪ್ರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಮಧ್ಯಪ್ರದೇಶದ ನರಸಿಂಗ್ ಪುರದಲ್ಲಿರುವ ವಿಶ್ವಾಸ ಪರಿಹಾರ್ ಅವರ ಮನೆಯಲ್ಲಿ ಜನಿಸಿದರು. ಇವರ ತಂದೆ ಮೂಲತಃ ಕೃಷಿಕರು.
ತಪಸ್ಯ ಪರಿಹಾರ್ ಆರಂಭಿಕ ಅಧ್ಯಯನವನ್ನು ನರಸಿಂಗ್ ಪುರದ ಕೇಂದ್ರೀಯ ವಿದ್ಯಾಲಯದಲ್ಲಿ ಮಾಡಿದ್ದಾರೆ. ನಂತರ, ಅವರು ಪುಣೆಯ ಇಂಡಿಯಾ ಲಾ ಸೊಸೈಟಿಯ ಕಾನೂನು ಕಾಲೇಜಿಗೆ ಸೇರಿದರು. ಕಾನೂನು ಓದುತ್ತಿದ್ದಾಗಲೇ ತಪಸ್ಯ ಅವರು UPSC ಪರೀಕ್ಷೆ ಬರೆಯಲು ನಿರ್ಧರಿಸಿದ್ದರು.
ತಪಸ್ಯಾ ಪರಿಹಾರ್ ತಮ್ಮ ಮೊದಲ ಪ್ರಯತ್ನಕ್ಕೆ ತರಬೇತಿಯ ಸಹಾಯವನ್ನು ತೆಗೆದುಕೊಂಡರು. ಅದರಲ್ಲಿ ವಿಫಲರಾದರು. ನಂತರ ಎರಡನೇ ಪ್ರಯತ್ನದಲ್ಲಿ ಯಾವುದೇ ಕೋಚಿಂಗ್ ಸಹಾಯವಿಲ್ಲದೆ ಸ್ವ ಅಧ್ಯಯನ ಮೂಲಕ ಯಶಸ್ವಿಯಾದರು.
UPSC ಪರೀಕ್ಷೆಯ ತಯಾರಿಯ ಸಮಯದಲ್ಲಿ, ಅವರ ಕುಟುಂಬವು ಅವಳನ್ನು ತುಂಬಾ ಬೆಂಬಲಿಸಿತು. ತಪಸ್ಯ ಅವರ ಚಿಕ್ಕಪ್ಪ ವಿನಾಯಕ ಪರಿಹಾರ್ ಅವರು ಸಾಮಾಜಿಕ ಕಾರ್ಯಕರ್ತ. ಅವರು UPSC ಪರೀಕ್ಷೆಗೆ ತಯಾರಿ ನಡೆಸುತ್ತಿರುವಾಗ ತಪಸ್ಯಾಗೆ ಸಾಕಷ್ಟು ಬೆಂಬಲ ನೀಡಿದರು.
ಅವರ ಕಠಿಣ ಪರಿಶ್ರಮದಿಂದಾಗಿ ಅವರು 2017 ರ UPSC ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 23ನೇ ರ್ಯಾಂಕ್ ಗಳಿಸಿದ್ದರು.ಐಎಎಸ್ ತಪಸ್ಯಾ ಪರಿಹಾರ್ ಅವರು 2021 ರಲ್ಲಿ ಐಎಫ್ ಎಸ್ ಗರ್ವಿತ್ ಗಂಗ್ವಾರ್ ಅವರನ್ನು ವಿವಾಹವಾದರು. ಐಎಎಸ್, ಐಎಫ್ ಎಸ್ ದಂಪತಿ ಮದುವೆ ಸಮಯದಲ್ಲಿ ತುಂಬಾನೇ ಸುದ್ದಿಯಾಗಿದ್ದರು.
ಮದುವೆಯ ಸಮಯದಲ್ಲಿ, ಕನ್ಯಾದಾನದ ಆಚರಣೆಯನ್ನು ಮಾಡಲು ಬಂದಾಗ ತಪಸ್ಯ ನಿರಾಕರಿಸಿದರು. ಹೆಣ್ಣು ದಾನ ಮಾಡುವ ವಸ್ತುವಲ್ಲ ಎಂದು ತನ್ನ ತಂದೆಗೆ ಹೇಳಿದರು. ಕನ್ಯಾದಾನ ಇಲ್ಲದಿದ್ದರೂ ಮದುವೆ ಮಾಡಬಹುದೆಂದು ಅವರ ಕುಟುಂಬದವರ ಜತೆಗೆ ವರನ ಕಡೆಯವರೂ ಮನವರಿಕೆ ಮಾಡಿಕೊಟ್ಟರು.