ಜಮ್ಮು&ಕಾಶ್ಮೀರ, ಏ. 23(DaijiworldNews/AK): ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್–ಎ–ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂ ದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ ಉಗ್ರನ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ರೂ. ಘೋಷಿಸಿದೆ.ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತ ವ್ಯದಲ್ಲಿದ್ದ ಮೊಹಮ್ಮದ್ ರಜಾಕ್ (40) ಅವರನ್ನು ಥಾನಮಂಡಿ ಪ್ರದೇಶದ ತಪ್ಪಲಿನ ಕುಂದಾ ಗ್ರಾಮದಲ್ಲಿ ಸೋ ಮವಾರ ಹತ್ಯೆಗೈಯಲಾಗಿತ್ತು. ರಜಾಕ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಯಿತು.
ಇಬ್ಬರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ರಜಾಕ್ ಅವರ ಸಹೋದರ ಮೊಹಮ್ಮದ್ ತಾಹೀರ್ ಚೌಧರಿ ಯೋಧರಾಗಿದ್ದು, ದಾಳಿಯಿಂದ
ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಥಾನಮಂಡಿ ಪೊಲೀ ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ