ಕಾಶ್ಮೀರ,ಮೇ6((DaijiworldNews/AZM): ಐದನೇ ಹಂತದ ಲೋಕಸಭಾ ಚುನಾವಣೆ ವೇಳೆ ಉಗ್ರರು ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೇ ತಮ್ಮ ಅಟ್ಟಹಾಸ ಮೆರೆದಿದ್ದು, ಬಾಂಬ್ ದಾಳಿ ನಡೆಸಿದ್ದಾರೆ.
ಪುಲ್ವಾಮಾದ ರಹ್ಮೂ ಮತಗಟ್ಟೆ ಬಳಿ ಬಾಂಬ್ ಸ್ಪೋಟಿಸಿದ ಭಯೋತ್ಪಾದಕರು, ಮತಗಾರರನ್ನು ಬೆದರಿಸಲು ನಡೆಸಿರುವ ಕೃತ್ಯ ಎನ್ನಲಾಗಿದೆ. ಕಡಿಮೆ ತೀವ್ರತೆಯ ಬಾಂಬ್ ಇದಾದ್ದರಿಂದ ಪ್ರಾಣಾಪಾಯವಾಗಲಿಲ್ಲ.
ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಅನಂತನಾಗ್ ಲೋಕಸಭಾ ಕ್ಷೇತ್ರದ ಸೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಬೆಳಗ್ಗೆ ಮತದಾನ ನಡೆಯುತ್ತಿದ್ದಾಗ ಉಗ್ರರು ಬಾಂಬ್ ಸ್ಫೋಟಿಸಿ ಭಯ-ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ.
ರಹ್ಮೂ ಪ್ರದೇಶದ ಮತಗಟ್ಟೆ ಸಮೀಪ ಬಾಂಬ್ ಸ್ಫೋಟಗೊಂಡಿತು. ಇದರಿಂದ ಮತದಾರರು ಆತಂಕಗೊಂಡರು. ಕೆಲಕಾಲ ಮತದಾನ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ನಂತರ ಚುನಾವಣಾ ಮುಂದುವರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.