ನವದೆಹಲಿ, ಏ 27 (DaijiworldNews/MS): ಸಾರ್ವತ್ರಿಕ ಚುನಾವಣೆಯಲ್ಲಿ ಕಣದಲ್ಲಿರುವ ಅಭ್ಯರ್ಥಿಗಳಿಗಿಂತ 'ನೋಟಾ'ಗೆ (ಮೇಲಿನ ಯಾರೂ ಅಲ್ಲ) ಹೆಚ್ಚು ಮತಗಳು ದೊರೆತರೆ ಆಆ ಕ್ಷೇತ್ರದಲ್ಲಿ ಚುನಾವಣೆಯನ್ನು ಅನೂರ್ಜಿತಗೊಳಿಸಿಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್, ಚುನಾವಣಾ ಆಯೋಗಕ್ಕೆ ಸೂಚಿಸಿ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ .ಚಂ ದ್ರಚೂಡ್, ನ್ಯಾಯಮೂರ್ತಿ ಗಳಾದ ಜೆ.ಬಿ.ಪರ್ದಿ ವಾಲಾ, ಮನೋ ಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಈ ಅರ್ಜಿ ಕುರಿತು ಚುನಾವಣಾ ಅಯೋಗಕ್ಕೆ ನೋಟಿಸ್ ಜಾರಿಮಾಡಿತು. ಆರಂಭದಲ್ಲಿ ಈ ಪಿಐಎಲ್ ಅನ್ನು ಪರಿಗಣಿಸಲು ಆಸಕ್ತಿ ಹೊಂದಿರದ ಪೀಠವು, ಬಳಿಕ ‘ಇದು ಚುನಾವಣಾ ಪ್ರಕ್ರಿಯೆ ಕುರಿತ ವಿಷಯವಾಗಿದ್ದು, ಆಯೋಗ ಏನು ಹೇಳುತ್ತದೆ ನೋಡೋಣ’ ಎಂದು ಹೇಳಿತು.
ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಗಳಿಗಿಂತಲೂ ಹೆಚ್ಚಿನ ಬಹುಮತ ನೋಟಾ ಆಯ್ಕೆಗೆ ಬಂದಿದ್ದರೆ, ಅಂಥ ಕ್ಷೇತ್ರದಲ್ಲಿ ಚುನಾವಣೆಯನ್ನು ಅನೂರ್ಜಿತಗೊಳಿಸಿ, ಮರು ಚುನಾವಣೆಗೆ ಆದೇಶಿಸಲು ನಿಯಮ ರೂಪಿಸಬೇಕು. ನೋಟಾಗಿಂತಲೂ ಕಡಿಮೆ ಮತಗಳನ್ನು ಗಳಿಸಿದ ಅಭ್ಯರ್ಥಿಯನ್ನು ಮುಂದಿನ 5 ವರ್ಷಗಳವರೆಗೆ ಯಾವುದೇ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬೇಕು. ನೋಟಾ ಎನ್ನುವುದು ಮತದಾರರಿಗಿರುವ ತಿರಸ್ಕಾರದ ಹಕ್ಕುಆಗಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಸ್ಪರ್ಧಿಗಳೇ ಇಲ್ಲದ ಕ್ಷೇತ್ರದಲ್ಲಿ ಪ್ರತಿಸ್ಪರ್ಧಿ ಯಾಗಿ ನೋಟಾ ಆಯ್ಕೆ ಇರಲೇಬೇಕು ಎಂದು ಕೋರಿ ಬರಹಗಾರ ಶಿವ್ ಖೇರಾ ಅವರು ಅರ್ಜಿಯನ್ನು ಸಲ್ಲಿಸಿದ್ದರು.