ಮಣಿಪುರ, ಏ 27 (DaijiworldNews/MS): ಮಣಿಪುರದ ಬಿಷ್ಣುಪುರ್ ಜಿಲ್ಲೆಯ ಅರೆಸೇನಾ ಪಡೆಯ ಔಟ್ಪೋಸ್ಟ್ನಲ್ಲಿ ಉಂಟಾದ ಸ್ಫೋಟದಲ್ಲಿ ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ.
ಮಧ್ಯರಾತ್ರಿಯಿಂದ ಕುಕಿ ಉಗ್ರರು ಬೆಳಗಿನ ಜಾವದವರೆಗೆ ಸಿಆರ್ಪಿಎಫ್ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ಹುತಾತ್ಮ ಯೋಧರು ರಾಜ್ಯದ ಬಿಷ್ಣುಪುರ್ ಜಿಲ್ಲೆಯ ನರಸೇನಾ ಪ್ರದೇಶದಲ್ಲಿ ನಿಯೋಜಿಸಲಾದ ಸಿಆರ್ಪಿಎಫ್ 128 ಬೆಟಾಲಿಯನ್ನವರಾಗಿದ್ದರು.
ಬಂದೂಕುಧಾರಿಗಳು ಮೈತೈ ಬಾಹುಳ್ಯದ ಬಿಷ್ಣುಪುರ್ ಜಿಲ್ಲೆಯ ನರೈಸೇನಾ ಗ್ರಾಮದಲ್ಲಿ ಗುಂಡು ಹಾರಾಟ ನಡೆಸಿದ್ದರು. ಅವರು ಬಾಂಬ್ ದಾಳಿ ನಡೆಸಿದ್ದು ಬಾಂಬ್ ನೇರವಾಗಿ ಸಿಆರ್ಪಿಎಫ್ ಔಟ್ಪೋಸ್ಟ್ನಲ್ಲಿ ಸ್ಫೋಟಿಸಿತ್ತು.
ಈ ಮಧ್ಯೆ, ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ಮಣಿಪುರದ ಹೊರಭಾಗದಲ್ಲಿ ಹೆಚ್ಚಿನ ಮತದಾನ ಹಿಂಸಾಚಾರ ಘಟನೆಗಳು ಕಡಿಮೆಯಾಗಿವೆ ಎಂದು ಮಣಿಪುರ ಮುಖ್ಯ ಚುನಾವಣಾ ಅಧಿಕಾರಿ ಪ್ರದೀಪ್ ಕುಮಾರ್ ಝಾ ಹೇಳಿದ್ದಾರೆ.ಮಣಿಪುರದಲ್ಲಿ ಶೇಕಡಾ 75 ರಷ್ಟು ಮತದಾನವಾಗಿದ್ದು, ಯಾವುದೇ ಸಮಸ್ಯೆಯಾಗಿಲ್ಲ ಎಂದು ಮಣಿಪುರ ಮುಖ್ಯ ಚುನಾವಣಾಧಿಕಾರಿ ಹೇಳಿದರು.