ಪುಲ್ವಾಮಾ, ಮೇ 06 (Daijiworld News/MSP): ಏಳು ರಾಜ್ಯಗಳ 51 ಲೋಕಸಭಾ ಕ್ಷೇತ್ರಗಳಲ್ಲಿ ಐದನೇ ಹಂತದ ಮತದಾನ ನಡೆಯುತ್ತಿದ್ದು, ಮತದಾರರು ಮತಗಟ್ಟೆಗಳಿಗೆ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಅಹಿತಕರ ಘಟನೆಯ ವರದಿಯಾಗಿದ್ದು ಗ್ರೆನೇಡ್ ದಾಳಿ ನಡೆದಿದೆ.
ಅನಂತ್ನಾಗ್ ಕ್ಷೇತ್ರದ ರಾಹ್ಮೂ ಎಂಬಲ್ಲಿ ಮತಗಟ್ಟೆಯನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಅದೃಷ್ಟವಶಾತ್, ಯಾರಿಗೂ ಹಾನಿಯಾಗಿಲ್ಲ. ಈ ಬಾರಿ ಲೋಕಸಭೆ ಚುನಾವಣೆ ವೇಳೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಮೊದಲ ದಾಳಿ ಇದಾಗಿದೆ.
ಈ ಮಧ್ಯೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಬೈರಕ್ಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರ್ಜುನ್ ಸಿಂಗ್ ಅವರು ಮತದಾನ ಮಾಡಿ ಹಿಂತಿರುಗುತ್ತಿರುವ ಸಂದರ್ಭ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. "ತೃಣಮೂಲ ಕಾಂಗ್ರೆಸಿಗರೇ ಗೂಂಡಾಗಿರಿ ನಡೆಸಿ ಹಲ್ಲೆ ಮಾಡಿದ್ದು ನಮ್ಮ ಮತದಾರರನ್ನು ಮತಗಟ್ಟೆಗೆ ತೆರಳದಂತೆ ಬೆದರಿಸುತ್ತಿದ್ದಾರೆ ಎಂದು ಅರ್ಜುನ್ ಆರೋಪಿಸಿದ್ದಾರೆ.