ಲಕ್ನೋ, ಮೇ 6(DaijiworldNews/AZM): ಲಕ್ನೋ ಕ್ಷೇತ್ರದಲ್ಲಿ ಇಂದು ಮತದಾನ ಮಾಡಿರುವ ರಾಜ್ ನಾಥ್ ಸಿಂಗ್ ಅವರು ಈ ಚುನಾವಣೆಗಳು ವ್ಯಕ್ತಿಗಳ ಬಗ್ಗೆ ಅಲ್ಲ ವಿಚಾರಗಳ ಬಗ್ಗೆ ಎಂದು ನಾನು ನಂಬಿದ್ದೇನೆ'' ಎಂದು ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮತದಾನದ ಬಳಿಕ ಮಾಧ್ಯಮದವರೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, "ತಮಗೆ ಯಾರು ಬೇಕೋ ಅವರನ್ನು ಆರಿಸುವ ಸಂಪೂರ್ಣ ಹಕ್ಕು ಜನರಿಗಿದೆ, ಏನಿದ್ದರೂ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುತ್ತಾರೆ''`ಮಹಾಮೈತ್ರಿ ಕೂಟ ಇಲ್ಲಿ ಬಿಜೆಪಿಗೆ ಯಾವುದೇ ಸವಾಲೊಡ್ಡಿಲ್ಲ. ನಾನು ಎದುರಾಳಿ ಅಭ್ಯರ್ಥಿಯ ಬಗ್ಗೆ ಏನನ್ನೂ ಹೇಳಲು ಇಚ್ಛಿಸುವುದಿಲ್ಲ ಎಂದ ಅವರು "ನನಗೆ ಯಾವುದೇ ಭವಿಷ್ಯ ನುಡಿಯಲು ಸಾಧ್ಯವಿಲ್ಲ. ನಿರ್ಧಾರವನ್ನು ಲಕ್ನೋ ಮತದಾರರಿಗೆ ಬಿಟ್ಟು ಬಿಡುತ್ತೇನೆ ಎಂದು ಹೇಳಿದ್ದಾರೆ.