ನವದೆಹಲಿ, ಏ. 30(DaijiworldNews/AA): ಜಿಡಿಪಿ ವೃದ್ಧಿಯ ವೇಗ ಹೆಚ್ಚಾದರೆ ಹಣದುಬ್ಬರವೂ ಹಾಗೇ ಹೆಚ್ಚಾಗಬೇಕಾಗುತ್ತದೆ. ಆದರೆ, ಭಾರತದಲ್ಲಿ ಹಾಗಾಗಿಲ್ಲ. ಜಿಡಿಪಿ ದರಕ್ಕೂ ಹಣದುಬ್ಬರಕ್ಕೂ ತಾಳೆ ಆಗುತ್ತಿಲ್ಲ ಎಂದು ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಂತರ ಭಾರತದ ಜಿಡಿಪಿ ದರ ಸತತವಾಗಿ ಶೇ. 7ರ ಮಟ್ಟಕ್ಕಿಂತ ಮೇಲಿದೆ. ಆದರೆ ಜಿಡಿಪಿ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಹಣದುಬ್ಬರ ವ್ಯಕ್ತವಾಗುತ್ತಿಲ್ಲ. ಹಾಗೆಯೇ ಭಾರತದ ನೈಜ ಆರ್ಥಿಕ ಬೆಳವಣಿಗೆ ಶೇ. 6ರಿಂದ 6.5ರಷ್ಟು ಮಾತ್ರವೇ ಇರಬಹುದು ಎಂದು ಅಂದಾಜಿಸಿದ್ದಾರೆ.
ಭಾರತದ ಜಿಡಿಪಿ ಕೆಲ ನಾಲ್ಕು ತ್ರೈಮಾಸಿಕ ಅವಧಿಯಿಂದ ಸರಾಸರಿಯಾಗಿ ಸುಮಾರು ಶೇ. 8ರ ದರದಲ್ಲಿ ಬೆಳೆದಿದೆ. ಹಣದುಬ್ಬರ ಈ ವೇಳೆ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ. ಇದು ಆರ್ಥಿಕತೆಯ ಸುಸ್ಥಿತಿಗೆ ದ್ಯೋತಕವಾಗಿದೆ. ಆದರೆ ಜಿಡಿಪಿ ದರಕ್ಕೆ ತಕ್ಕಂತೆ ಬೆಲೆ ಏರಿಕೆ ಇಲ್ಲವಲ್ಲ ಎಂದಿದ್ದಾರೆ.