ಹರಿಯಾಣ, ಮೇ.2(DaijiworldNews/AK):ಪ್ರತಿಭಾವಂತ ಯುವತಿಯಾದ ಸಿಮ್ರನ್ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಯಶಸ್ವಿಯಾಗಿದ್ದಾರೆ. ಅವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಸಿಮ್ರನ್ 2021 ರಲ್ಲಿ CDS ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದರು. ಇದರಲ್ಲಿ ಅವರು ಅಖಿಲ ಭಾರತ 6 ನೇ ರ್ಯಾಂಕ್ ಗಳಿಸಿದರು. ಯುಪಿಎಸ್ ಸಿಯಲ್ಲಿ ತೇರ್ಗಡೆಯಾಗಿ ಐಪಿಎಸ್ ಆದರು.ಸಿಮ್ರನ್ ಹರಿಯಾಣದ ಹಳ್ಳಿಯೊಂದರ ನಿವಾಸಿ. ಅವರು ಐಪಿಎಸ್ ಅಧಿಕಾರಿಯಾಗಬೇಕು ಕನಸು ಕಂಡಿದ್ದರು. ಆದರೆ 2021 ರಲ್ಲಿ, ಅವರು ಕಂಬೈನ್ಡ್ ಡಿಫೆನ್ಸ್ ಸರ್ವಿಸಸ್ ಅಂದರೆ CDS ಪರೀಕ್ಷೆಯಲ್ಲಿ ಉತ್ತೀರ್ಣರಾದರು.
ಆದರೆ ಅವರು ಸಿಡಿಎಸ್ ಸೀಟು ಬಿಟ್ಟು ಯುಪಿಎಸ್ ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿದರು. 2021 ರಲ್ಲಿ ಅವರು UPSC ಪರೀಕ್ಷೆಯನ್ನು ನೀಡಿದರು. ಮೊದಲ ಪ್ರಯತ್ನದಲ್ಲಿಯೇ ಅಖಿಲ ಭಾರತ 172ನೇ ರ್ಯಾಂಕ್ ಗಳಿಸಿದರು.
ಸಿಮ್ರಾನ್ ಭಾರದ್ವಾಜ್ ಅವರ ತಂದೆ ಸೇನೆಯಲ್ಲಿ ಇದ್ದಾರೆ. ಅವರು ತಮ್ಮ ಶಾಲಾ ಶಿಕ್ಷಣವನ್ನು ಜಮ್ಮುವಿನ ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ಮಾಡಿದರು. ಇದರ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಲ್ಲಿ ಪದವಿ ಪಡೆದರು. ಮೊದಲಿನಿಂದಲೂ ಆಕೆ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು.
ಆ ಮೂಲಕ ಅವರು ತಮ್ಮ ಐಪಿಎಸ್ ಸೇವೆಯನ್ನು ಪಡೆದರು. ಸಿಮ್ರನ್ ಸಿಡಿಎಸ್ ಸೀಟು ತೊರೆದು ಐಪಿಎಸ್ ಆಗಲು ಆಯ್ಕೆ ಮಾಡಿಕೊಂಡರು.
ಇತ್ತೀಚೆಗೆ, ಸಿಮ್ರನ್ ತನ್ನ ಸಂದರ್ಶನವೊಂದರಲ್ಲಿ, ಯುಪಿಎಸ್ ಸಿಗೆ ತಯಾರಿ ನಡೆಸುವಾಗ ಟಾಪರ್ ಗಳ 40-50 ವಿಡಿಯೋಗಳನ್ನು ನೋಡಿದ್ದೇನೆ ಎಂದು ಸಿಮ್ರನ್ ಹೇಳಿದ್ದರು. ಇದನ್ನು ನೋಡಿ ನಾನು ನನ್ನ ಅಧ್ಯಯನದ ಯೋಜನೆಯನ್ನು ಸಿದ್ಧಪಡಿಸಿದೆ ಎಂದು ತಿಳಿಸಿದ್ದಾರೆ
ಅಲ್ಲದೆ, ಅವರು ತಮ್ಮ ದೌರ್ಬಲ್ಯ ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಸಿದ್ಧಪಡಿಸಿದ್ದರು. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಅವರು ಯುಪಿಎಸ್ ಸಿಗೆ ತಯಾರಿ ನಡೆಸಿ ಯಶಸ್ವಿಯಾದರು