ಅಯೋಧ್ಯೆ, ಮೇ.3(DaijiworldNews/AA): ರಾಮಮಂದಿರ ಲೋಕಾರ್ಪಣೆಯಾದಾಗಿನಿಂದ ದಿನಂಪ್ರತಿ ಸಾವಿರಾರು ಮಂದಿ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಇದೀಗ 200 ಮಂದಿ ಪಾಕಿಸ್ತಾನಿಗಳು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.
ಪಾಕಿಸ್ತಾನದ ಸಿಂಧಿ ಸಮುದಾಯಕ್ಕೆ ಸೇರಿದ 200 ಮಂದಿ ಇಂದು ಅಯೋಧ್ಯೆಗೆ ಆಗಮಿಸಿ ರಾಮಲಲ್ಲಾಗೆ ಪೂಜೆ ಸಲ್ಲಿಸಲಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ 200 ಸದಸ್ಯರ ನಿಯೋಗವು ಭಾರತದಲ್ಲಿ ಒಂದು ತಿಂಗಳ ಧಾರ್ಮಿಕ ಪ್ರವಾಸ ಕೈಗೊಂಡಿದೆ. ಈ ಹಿನ್ನೆಲೆ ಇಂದು ಅಯೋಧ್ಯೆಗೆ ಭೇಟಿ ನೀಡಲಿದೆ. ಇನ್ನು ಇವರನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಅವರು ರಾಮ್ ಕಿ ಪೈಡಿಯಲ್ಲಿ ಸ್ವಾಗತಿಸಿದ್ದಾರೆ ಎಂದು ತಿಳಿದುಬಂದಿದೆ.