ಹಾವೇರಿ, ಮೇ.5(DaijiworldNews/AA): ಚುನಾವಣಾ ಪ್ರಚಾರದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಕೈ ಮುಖಂಡನಿಗೆ ಕಪಾಳ ಮೋಕ್ಷ ಮಾಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ಶನಿವಾರ ಸವಣೂರ ಪಟ್ಟಣದಲ್ಲಿ ಧಾರವಾಡ ಕ್ಷೇತ್ರದ ಕೈ ಅಭ್ಯರ್ಥಿ ವಿನೋದ ಅಸೂಟಿ ಪರ ಪ್ರಚಾರಕ್ಕೆ ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಪುರಸಭೆ ಸದಸ್ಯ ಅಲ್ಲಾವುದ್ದೀನ್ ಮನಿಯಾರ್ ಎಂಬುವವರಿಗೆ ಡಿಕೆ ಶಿವಕುಮಾರ್ ಅವರು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಅಲ್ಲಾವುದ್ದೀನ್ ಮನಿಯಾರ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಡಿಕೆ ಶಿವಕುಮಾರ್ ಅವರು ಅಲ್ಲಾವುದ್ದೀನ್ ಮನಿಯಾರ್ ಗೆ ಹೊಡೆಯಲು ಒಂದು ಕಾರಣವಿದೆ. ಅದೇನೆಂದರೆ ಡಿಕೆಶಿ ಬಂದಾಗ ಕೈ ಕಾರ್ಯಕರ್ತರು ಡಿಕೆ ಡಿಕೆ ಜೈಕಾರ ಹಾಕುತ್ತಿದ್ದರು. ಬಳಿಕ ಡಿಕೆಶಿ ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಅಲ್ಲಾವುದ್ದೀನ್ ಮನಿಯಾರ್ ಡಿಕೆಶಿ ಹೆಗಲ ಮೇಲೆ ಕೈ ಹಾಕಿದ್ದಾರೆ. ಹೀಗಾಗಿ ಡಿಕೆಶಿ ಅಲ್ಲಾವುದ್ದೀನ್ ಮನಿಯಾರ್ ಕಪಾಳಕ್ಕೆ ಹೊಡೆದಿದ್ದಾರೆ.