ನವದೆಹಲಿ, ಮೇ.8(DaijiworldNews/AK): ರಾಜಸ್ಥಾನದ ನಾಗೌರ್ನ ಸಣ್ಣ ಪಟ್ಟಣದ ಯುವತಿ ಮುದಿತಾ ಶರ್ಮಾ ಇದಕ್ಕೆ ಅದ್ಭುತ ಉದಾಹರಣೆ. ಮೊದಲು ತಂದೆ-ತಾಯಿಯ ಆಸೆಯಂತೆ ಉತ್ತಮವಾಗಿ ಓದಿದ ಅವರು ವೈದ್ಯೆಯಾದರು. ನಂತರ ದೇಶದ ಅತಿದೊಡ್ಡ ಸರ್ಕಾರಿ ಸೇವೆಯ ಭಾಗವಾಗುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ. ಇವರ ಸಕ್ಸಸ್ ಸ್ಟೋರಿ ಇಲ್ಲಿದೆ.
ಐಎಎಸ್ ಮುದಿತಾ ಶರ್ಮಾ ರಾಜಸ್ಥಾನದ ನಾಗೌರ್ ಜಿಲ್ಲೆಯ ಮೆರ್ಟಾ ಪಟ್ಟಣದ ನಿವಾಸಿ. ಚಿಕ್ಕಂದಿನಿಂದಲೂ ಓದಿನಲ್ಲಿ ಚುರುಕಾಗಿದ್ದ ಮುದಿತಾ 10ನೇ ತರಗತಿ ಪರೀಕ್ಷೆಯಲ್ಲಿ ರಾಜ್ಯದಲ್ಲೇ 15ನೇ ಸ್ಥಾನ ಪಡೆದಿದ್ದರು. ಮುದಿತಾ ಶರ್ಮಾ ಅವರ ತಂದೆ ಭಗವತಿ ಲಾಲ್ ಶರ್ಮಾ ಅವರು ಮೆರ್ಟಾದಲ್ಲಿರುವ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾಗಿದ್ದಾರೆ. ತಾಯಿ ಗೃಹಿಣಿಯಾದರೂ ಬಿ.ಎಡ್ ಮಾಡಿದ್ದಾರೆ.
12 ತರಗತಿ ನಂತರ, ಮುದಿತಾ ಜೋಧ್ಪುರದ ಎಸ್ಎನ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಮಾಡಿದರು. ಇದಾದ ನಂತರ ಪ್ರಾಕ್ಟೀಸ್ ಗಾಗಿ ಜೈಪುರದ ಖಾಸಗಿ ಆಸ್ಪತ್ರೆ ಸೇರಿದರು. ಆದರೆ ಚಿಕ್ಕಂದಿನ ತಮ್ಮ ಕನಸು ಪ್ರಾಕ್ಟೀಸ್ ಬಿಡುವಂತೆ ಮಾಡಿತು. ವಿದ್ಯಾರ್ಥಿ ದೆಸೆಯಿಂದಲೂ ಐಎಎಸ್ ಅಧಿಕಾರಿಯಾಗುವುದು ಕನಸನ್ನು ನನಸಾಗಿಸಿಕೊಳ್ಳಬೇಕು ನಿರ್ಧರಿಸಿದರು. ನಂತರ ಅವರು ವೈದ್ಯ ವೃತ್ತಿ ಬಿಟ್ಟು ಯುಪಿಎಸ್ ಸಿ ಗೆ ಸಂಪೂರ್ಣವಾಗಿ ತಯಾರಿ ಆರಂಭಿಸಿದರು.
ವೈದ್ಯ ವೃತ್ತಿಯನ್ನು ತೊರೆದು ದೆಹಲಿಯಲ್ಲಿ ಒಂದು ವರ್ಷ ಯುಪಿಎಸ್ಸಿ ಕೋಚಿಂಗ್ ಪಡೆದರು. ನಂತರ ದೆಹಲಿಯಲ್ಲಿ ಓದು ಮುಂದುವರಿಸಿದ ಮುದಿತಾ ಶರ್ಮಾ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ 2022 ಬ್ಯಾಚ್ನಲ್ಲಿ ಅಖಿಲ ಭಾರತ 381 ನೇ ರ್ಯಾಂಕ್ ಗಳಿಸಿ ತಮ್ಮ ಕನಸಿನ ಐಎಎಸ್ ಅಧಿಕಾರಿಯಾದರು. ನಿಗದಿತ ವೇಳಾಪಟ್ಟಿಯು ಸಮಯಕ್ಕೆ ಸರಿಯಾಗಿ ನಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ ಎಂದು ತಿಳಿಸಿದ್ದಾರೆ.